ಉಪ್ಪಿನಂಗಡಿ: ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯ ಹಳೆ ಗೇಟ್ ಸಮೀಪದಲ್ಲಿ ನಡೆದ ತಲುವಾರು ದಾಳಿಗೆ ಸಂಬಂಧಿಸಿ ಮೂವರು ಪಿಎಫ್ಐ ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಿಚಾರಣೆ ನಡೆಸಲು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆ ತಂದಿದ್ದು, ಈ ವಿಷಯ ತಿಳಿದ ಪಿಎಫ್ಐ ಕಾರ್ಯಕರ್ತರು ಠಾಣೆ ಎದುರು ಜಮಾಯಿಸಿ, ಪ್ರತಿಭಟನೆ ನಡೆಸಿದರು.
ಪಿಎಫ್ಐ ಮುಖಂಡರಾದ ಹಮೀದ್ ಮೆಜೆಸ್ಟಿಕ್, ಝಕಾರಿಯ ಕೊಡಿಪ್ಪಾಡಿ ಹಾಗೂ ಮುಸ್ತಫಾ ಎಂಬವರನ್ನು ವಿಚಾರಣೆಗಾಗಿ ಪೊಲೀಸರು ಉಪ್ಪಿನಂಗಡಿ ಠಾಣೆಗೆ ಕರೆತಂದಿದ್ದು, ಈ ಹಿನ್ನೆಲೆಯಲ್ಲಿ ಠಾಣೆ ಹೊರಗಡೆ ಪಿಎಫ್ಐ ಕಾರ್ಯಕರ್ತರು ಜಮಾಯಿಸಿ, ಘೋಷಣೆ ಕೂಗಿ ತಮ್ಮ ಮುಂದಾಳುಗಳ ಬಿಡುಗಡೆಗೆ ಒತ್ತಾಯಿಸಿದರು.
Kshetra Samachara
14/12/2021 06:01 pm