ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಲವ್ ಜಿಹಾದ್, ಮತಾಂತರ ವಿರುದ್ಧ ಕಠಿಣ ಕಾನೂನು ಜಾರಿಗೆ ಸಿಎಂಗೆ ಮನವಿ; ನಳಿನ್

ಮಂಗಳೂರು: ಪ್ರೀತಿ- ಪ್ರೇಮ ಎಂದು ಹಿಂದೂ ಹುಡುಗಿಯರ ಮನಸ್ಸು ಕೆಡಿಸಿ ಲವ್ ಜಿಹಾದ್ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಜಾರಿಗೊಳಿಸುವಂತೆ ಸಿಎಂಗೆ ಮನವಿ ಮಾಡುತ್ತೇನೆ. ಈ ಮೂಲಕ ರಾಜ್ಯದಲ್ಲಿ ಮತಾಂತರಕ್ಕೆ ಕಡಿವಾಣ ಹಾಕುವ ಕಾರ್ಯ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಆಸೆ- ಆಮಿಷವೊಡ್ಡಿ ಮತಾಂತರ ಮಾಡುವ ಕಾರ್ಯ ಅವ್ಯಾಹತವಾಗಿ ನಡೆಯುತ್ತಿದೆ. ಇದೀಗ ಬಿಜೆಪಿ ಸರಕಾರ ಬಂದ ಬಳಿಕ ಮತಾಂತರ ನಿಷೇಧಕ್ಕೂ ವಿಧೇಯಕ ಜಾರಿಗೊಳಿಸುವ ಕಾರ್ಯ ಮಾಡಿದೆ ಎಂದರು.

ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದೇಶದಲ್ಲಿ ಪರಿವರ್ತನೆ ಮಾಡಲಾಗುತ್ತಿದೆ. ಮನಸ್ಸುಗಳನ್ನು ಅರಳಿಸುವ ಕೆಲಸವನ್ನು ಅಧ್ಯಾತ್ಮ ಮಾಡುತ್ತದೆ. ಭಾರತೀಯರು ಪ್ರತಿ ವ್ಯಕ್ತಿಯಲ್ಲಿಯೂ ದೇವರನ್ನು ಕಾಣುತ್ತಾರೆ. ಆದರೆ, ವಿಕೃತ ಮನಸ್ಥಿತಿಯವರು ಮನಸ್ಸುಗಳನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ‌. ದೇಶದ ಮೂರೂ ಸೇನೆಗಳ ಮುಖ್ಯಸ್ಥರಾದ ರಾವತ್ ಅವರು ಅಗಲಿದ ಸಂದರ್ಭ ಕೀಳಾಗಿ ಮಾತನಾಡಿದವರು ನಮ್ಮಲ್ಲಿಯೇ ಇದ್ದರು. ನಮ್ಮ ಸರಕಾರ ಅಂತಹ ವಿಕೃತ ಮನಸ್ಥಿತಿಯ ಎಲ್ಲರನ್ನೂ ಬಂಧಿಸುವ ಕಾರ್ಯ ಮಾಡುತ್ತದೆ. ಈಗಾಗಲೇ ಇದಕ್ಕೆ ಬೇಕಾದ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ನಳಿನ್ ತಿಳಿಸಿದರು.

Edited By : Nagesh Gaonkar
Kshetra Samachara

Kshetra Samachara

13/12/2021 08:04 pm

Cinque Terre

12.37 K

Cinque Terre

3

ಸಂಬಂಧಿತ ಸುದ್ದಿ