ಮಂಗಳೂರು : ಕಳೆದ ದಿನಗಳ ಹಿಂದೆ ಬಸ್ಸಿನಲ್ಲಿದ್ದ ಯುವಕ- ಯುವತಿಯನ್ನು ಪ್ರಶ್ನಿಸಿ, ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆಯಲ್ಲಿ ಪೊಲೀಸರು ಸ್ವಯಂಪ್ರೇರಿತ. ಕೇಸು ದಾಖಲಿಸಿ, ನಾಲ್ವರನ್ನು ಬಂಧಿಸಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ
ನಳಿನ್ ಕುಮಾರ್ ಕಟೀಲ್ ಅವರೇ ನಿಮಗೆ ತಾಕತ್ತಿಲ್ಲದಿದ್ದರೆ, ರಾಜಿನಾಮೆ ಕೊಟ್ಟು ಹೋಗಿ.. ಧಮ್ ಇಲ್ಲದಿದ್ದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಬೇಡಿ... ಹಿಂದು ಸಮಾಜಕ್ಕಾಗಿ ದುಡಿಯುವ ಹಿಂದು ಕಾರ್ಯಕರ್ತರು ಪೊಲೀಸರ ಕಿರುಕುಳದಿಂದ ಒಡೆದು ಹೋಗುತ್ತಿದ್ದಾರೆ. ನೀವು ಗೆದ್ದಿರುವುದು ನಿಮ್ಮ ಶಕ್ತಿಯಿಂದಲ್ಲ. ಕಾರ್ಯಕರ್ತರಿಂದ ಸ್ವಲ್ಪ ನೆನಪಿಸಿಕೊಳ್ಳಿ. ಈ ರೀತಿಯ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಹೀಗೆ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಛೇಡಿಸಿದ್ದು ಬೇರಾರೂ ಅಲ್ಲ. ಬಿಜೆಪಿ, ಸಂಘ ಪರಿವಾರಕ್ಕಾಗಿ ಅವಿರತ ದುಡಿಯುತ್ತಿರುವ ಕಾರ್ಯತರ್ತರೇ ಹೀಗೆ ಸವಾಲು ಹಾಕಿದ್ದಾರೆ.
ದಕ್ಷಿಣ ಕನ್ನಡ ಸಂಸದರಾಗಿ ಮೂರು ಬಾರಿ ಅಧಿಕಾರ ಅನುಭವಿಸಿದರೂ, ಪಕ್ಷ ಮತ್ತು ಹಿಂದು ಸಮಾಜಕ್ಕಾಗಿ ಏನೂ ಮಾಡದಿದ್ದರೂ ಈಗ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ರವರನ್ನು ಬಹಿರಂಗ ಪ್ರಶ್ನೆ ಮಾಡುತ್ತಿದ್ದಾರೆ.
ಕೆಲವು ಕಾರ್ಯಕರ್ತರು ವಾಟ್ಸಪ್, ಫೇಸ್ಟುಕ್ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
Kshetra Samachara
13/12/2021 12:38 pm