ಬಂಟ್ವಾಳ: ದ.ಕ.-ಉಡುಪಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ವಿಧಾನ ಪರಿಷತ್ತಿನ 2 ಸ್ಥಾನಗಳಿಗೆ ಡಿ. 10 ರಂದು ಚುನಾವಣೆ ಮತದಾನ ಆರಂಭಗೊಂಡಿದ್ದು, ಬಂಟ್್ವಾಳದ 59 ಬೂತ್ ಗಳಲ್ಲಿ ಮತದಾನ ನಡೆಯುತ್ತಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಬಂಟ್ವಾಳ ಪುರಸಭೆಯ ಬೂತ್ ನಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಬಂಟ್ವಾಳ ತಾಲೂಕಿನ 58 ಗ್ರಾ.ಪಂ.ಗಳು ಹಾಗೂ ಬಂಟ್ವಾಳ ಪುರಸಭೆ ಸೇರಿ ಒಟ್ಟು 59 ಬೂತ್ಗಳಲ್ಲಿ ಮತದಾನ ಪ್ರಕ್ರಿಯೆ ನಡೆಯುತ್ತಿದೆ. 437 ಪುರುಷರು ಹಾಗೂ 466 ಮಹಿಳೆಯರು ಸೇರಿ ಒಟ್ಟು 903 ಮಂದಿ ಮತದಾರರಿದ್ದಾರೆ. ಪ್ರತಿ ಬೂತ್ಗಳಲ್ಲಿ ಓರ್ವ ಪಿಆರ್ಒ, ಎಪಿಆರ್ ಒ., ಮೈಕ್ರೋ ಅಬ್ಸಾರ್ವರ್, ಡಿ ಗ್ರೂಪ್, ಪೊಲೀಸ್ ಸಿಬಂದಿ, ಕ್ಯಾಮರಾ ಮ್ಯಾನ್ ಇದ್ದು, ಸುಗಮ ಮತದಾನ ಪ್ರಕ್ರಿಯೆಗಾಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಂಟ್ವಾಳ ಪುರಸಭೆಯಲ್ಲಿ 27 ಸದಸ್ಯರು, 5 ಮಂದಿ ನಾಮ ನಿರ್ದೇಶಿತ ಸದಸ್ಯರು, ಶಾಸಕರು ಸೇರಿ ಒಟ್ಟು 33 ಮಂದಿಗೆ ಮತದಾನದ ಹಕ್ಕು ಇದ್ದು, ಬಹುತೇಕರು ಮತ ಚಲಾವಣೆಗೆ ಮತಗಟ್ಟೆಗಳಿಗೆ ಆಗಮಿಸಿದರು.
Kshetra Samachara
10/12/2021 12:58 pm