ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭದ್ರತಾ ಸಿಬ್ಬಂದಿಗಳಿಂದ ಗ್ರಾಹಕರಿಗೆ ತೊಂದರೆ ; ಶಾಸಕ ಭರತ್ ಶೆಟ್ಟಿ ಪರಿಶೀಲನೆ

ಸುರತ್ಕಲ್:ಪಣಂಬೂರು ಮಾರ್ಕೆಟ್ ಪ್ರದೇಶಕ್ಕೆ ಬರುವ ಗ್ರಾಹಕರಿಗೆ ಭದ್ರತಾ ಸಿಬ್ಬಂದಿಗಳು ಗುರುತು ಪತ್ರ ಕೇಳಿ ನಿಲ್ಲಿಸುತ್ತಿರುವುದರಿಂದ ವ್ಯಾಪಾರ ವಹಿವಾಟಿಗೆ ತೊಂದರೆ ಆಗುತ್ತಿದೆ ಎಂದು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಗೆ ದೂರು ನೀಡಿದ ಹಿನ್ನಲೆಯಲ್ಲಿ ನವಮಂಗಳೂರು ಬಂದರು ಮಂಡಳಿಯ ಚೇಯರ್‍ಮನ್ ಡಾ.ಎ.ವಿ ರಮಣ ರವರೊಂದಿಗೆ ಶಾಸಕರು ಮಾತುಕತೆ ನಡೆಸಿ ಭದ್ರತಾ ವ್ಯವಸ್ಥೆ ಸರಳಗೊಳಿಸಲು ತಿಳಿಸಿದ ಮೇರೆಗೆ ಯಾವುದಾದರೊಂದು ಗುರುತು ಪತ್ರವಿದ್ದಲ್ಲಿ ಹೋಗಲು ಅವಕಾಶ ನೀಡಲಾಗಿದೆ.

ಕೈಗಾರಿಕಾ ಪ್ರದೇಶ, ಕುಡುಂಬೂರಿನಿಂದ ಬರುವವರಿಗೆ ಇದ್ದ ದಾರಿಯನ್ನು ಮತ್ತೆ ಮುಕ್ತವಾಗಿಡಲು ಒಪ್ಪಿಗೆ ಸೂಚಿಸಿದರು.

ಕೇಂದ್ರದ ಭದ್ರತಾ ತಂಡಗಳು ಬಂದರು ಮಂಡಳಿಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡಲು ಸೂಚಿಸಿದ್ದರಿಂದ ಅನುಷ್ಠಾನಗೊಳಿಸಲಾಗಿದೆ ಎಂದು ಮಂಡಳಿ ಚೇರ್ಮನ್ ಶಾಸಕರಿಗೆ ಮಾಹಿತಿ ನೀಡಿದರು.

ಜನತೆಗೆ ಯಾವುದೇ ರೀತಿಯಂದಲೂ ತೊಂದರೆ ಆಗದಂತೆ ಮಂಡಳಿ ಕ್ರಮ ಜರುಗಿಸಬೇಕು ಎಂದು ಶಾಸಕರು ಸೂಚಿಸಿದರು.

ಶಾಸಕರ ಜೊತೆಗೆ ಸ್ಥಳೀಯ ಕಾರ್ಪೊರೇಟರ್ ಸುನೀತಾ ಸಾಲ್ಯಾನ್, ರಾಜೇಶ್ ಬೈಕಂಪಾಡಿ, ಪಕ್ಷದ ಪ್ರಮುಖರಾದ ಅರವಿಂದ್ ಬೆಂಗ್ರೆ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/11/2021 03:34 pm

Cinque Terre

1.81 K

Cinque Terre

0

ಸಂಬಂಧಿತ ಸುದ್ದಿ