ಉಡುಪಿ: ಕನ್ನಡಾಭಿಮಾನಿಗಳ, ಹಿತೈಷಿಗಳ ಒತ್ತಾಯದ ಮೇರೆಗೆ ಕಸಾಪ ಚುನಾವಣೆಗೆ ಸ್ಪರ್ಧಿಸುತ್ತಿದ್ದು ಕನ್ನಡ ಭವನ ನಿರ್ಮಾಣದೊಂದಿಗೆ ಅಲ್ಲಿ ನಿರಂತರ ಸಾಹಿತ್ಯ ಚಟುವಟಿಕೆ ನಡೆಯುವಂತೆ ಮಾಡುವ ಸಂಕಲ್ಪ ನನ್ನದು ಎಂದು ಕಸಾಪ ನಿಕಟಪೂರ್ವಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ,ನನ್ನ ಅಧಿಕಾರಾವಧಿಯಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮ-ಹೋಬಳಿ-ತಾಲೂಕು-ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳು, ತಾಲೂಕು-ಜಿಲ್ಲಾ ಶಾಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ, ಶಿಕ್ಷಕರ
ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮಾವೇಶ, ರಾಷ್ಟ್ರಮಟ್ಟದ ವಿಚಾರಗೋಷ್ಠಿ, ಪುಸ್ತಕ ಬಿಡುಗಡೆ, ಕಾವ್ಯಕಮ್ಮಟ, ಕವಿ- ಕೃತಿ-ಸಂಸ್ಕೃತಿ, ಕವಿಗೋಷ್ಠಿ , ಶಿಕ್ಷಕರಿಗೆ ಕಾರ್ಯಾಗಾರ, ಕಾವ್ಯ-ಗಮಕ, ಮನೆಯಂಗಳದಲ್ಲಿ ಕಲೆ ಸಾಹಿತ್ಯ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳು ಜರಗಿವೆ.ಅವಕಾಶ ಸಿಕ್ಕಿದರೆ ಮತ್ತೊಮ್ಮೆ ಕನ್ನಡ ಸೇವೆ ಮಾಡುವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಪ್ರಮುಖರಾದ ದೇವದಾಸ ಹೆಬ್ಬಾರ್, ಪುಂಡಲೀಕ ಮರಾಠೆ, ನರಸಿಂಹ ಮೂರ್ತಿ , ಪ್ರಭಾಕರ ಶೆಟ್ಟಿ ಕೊಂಡಳ್ಳಿ ಸೂರಾಲು ನಾರಾಯಣ ಮಡಿ, ನಾರಾಯಣ ಬಿ. ಮತ್ತಿತರರು ಉಪಸ್ಥಿತರಿದ್ದರು.
Kshetra Samachara
20/11/2021 02:58 pm