ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಳೆಯಂಗಡಿ: 'ಮಹಿಳೆಯರು ಸಂಘಟಿತರಾಗಿ ಕಾಂಗ್ರೆಸ್ ಬಲಪಡಿಸಬೇಕು'

ಮುಲ್ಕಿ: ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಮುಲ್ಕಿ ಹೋಬಳಿ ಮಟ್ಟದ ಅಂತರ್ ಶಾಲೆ ಹಾಗೂ ಕಾಲೇಜಿನ ಮಕ್ಕಳ ಜಾನಪದ ನೃತ್ಯ ಸ್ಪರ್ಧೆ ಹಳೆಯಂಗಡಿಯ ಹರಿ ಓಂ ಸಭಾಭವನದಲ್ಲಿ ಶುಕ್ರವಾರ ನಡೆಯಿತು.

ಕಾರ್ಯಕ್ರಮವನ್ನು ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ ಸದಸ್ಯೆ ಶೈಲಾ ಸಿಕ್ವೇರಾ ಉದ್ಘಾಟಿಸಿ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಆದರ್ಶಗಳನ್ನು ಪಾಲಿಸುವುದರ ಜೊತೆಗೆ ಮಹಿಳೆಯರು ಸಂಘಟಿತರಾಗಿ ಪಕ್ಷ ಬಲಪಡಿಸಲು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಿಲ್ಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾ, ಹಳೆಯಂಗಡಿ ಗ್ರಾ.ಪಂ ಪ್ರಜಾಪ್ರತಿನಿಧಿ ಸಮಿತಿ ಗೌರವಾಧ್ಯಕ್ಷ ಮಿರ್ಜಾ ಅಹಮದ್, ಅಧ್ಯಕ್ಷ ಧನರಾಜ ಕೋಟ್ಯಾನ್, ಮುಲ್ಕಿ ನಪಂ ಸದಸ್ಯ ಮಂಜುನಾಥ ಕಂಬಾರ,ಅನಿತಾ ಕಿನ್ನಿಗೋಳಿ,ಸುಜಾತ ಭಟ್, ಕಾರ್ಯಕ್ರಮ ಸಂಚಾಲಕಿ ನಂದಾ ಪಾಯಸ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/11/2021 10:23 am

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ