ಉಡುಪಿ: ಕಳೆದ ಹಲವು ವರ್ಷಗಳಿಂದಲೂ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರತರಾಗಿರುವ 'ಬಿರುವೆರ್ ಕುಡ್ಲ'
ಸಂಘಟನೆಯ ಹೆಸರನ್ನು ಕೆಡಿಸುವ ಷಡ್ಯಂತ್ರ ನಡೆಯುತ್ತಿದೆ. ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಪೂರ್ಣ ಮಾಹಿತಿ ಅರಿಯದೆ ಸಂಘಟನೆ ಮೇಲೆ ಆರೋಪ ಮಾಡಿದ್ದು ನೋವುಂಟು ಮಾಡಿದೆ. ಇದಕ್ಕಾಗಿ ಅವರು ಎರಡು ದಿನದೊಳಗೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಬಲ್ಲಾಳ್ ಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು 'ಬಿರುವೆರ್ ಕುಡ್ಲ' ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿ 'ಪಬ್ಲಿಕ್ ನೆಕ್ಸ್ಟ್' ಜೊತೆ ಮಾತನಾಡಿದ ಸಂಘಟನೆ ಮುಖಂಡರು, ನಮಗೂ ಕೂಡ ನಮ್ಮ ಸಂಘಟನೆಯ ಘನತೆ- ಗೌರವ ಉಳಿಸಿಕೊಳ್ಳುವ ಜವಾಬ್ದಾರಿಯಿದೆ.
ಅವರು ಕೌಟುಂಬಿಕ ಸಂಬಂಧ ಆಧಾರದಲ್ಲಿ ಮೆಚ್ಚಿಸಲು ಏಕಾಏಕಿ ಬಿರುವೆರ್ ಕುಡ್ಲದ ಮೇಲೆ ಆರೋಪಿಸುವುದು ಸಲ್ಲದು. ಮುಖ್ಯವಾಗಿ ಬಳ್ಳಾಲ್ ಬಾಗ್ ಪ್ರದೇಶದಲ್ಲಿರುವವರು ಇಂತಹ ಯಾವುದೇ ಕೆಲಸ ಮಾಡಲಾರರು.
ಗುರ್ಜಿ ದೀಪೋತ್ಸವದ ಜವಾಬ್ದಾರಿ ಹೊತ್ತ ಸಮಿತಿಯ ಪವಿತ್ರ ಜಾಗದಲ್ಲಿ ಕುಡಿದು, ದಾರಿಯಲ್ಲಿ ಹೋಗುವವರಿಗೆ ಗುರಾಯಿಸುವ, ತಮಾಷೆ ಮಾಡುವ ಮೂಲಕ ಪ್ರಚೋದನೆ ನೀಡಿ ಹೊರಗಿನಿಂದ ಬಂದ ಜನ ಪಾರ್ಟಿ ಹೆಸರಿನಲ್ಲಿ ಗಲಾಟೆಗೆ ಕಾರಣರಾಗುತ್ತಿದ್ದಾರೆ. ಶರಣ್ ಪಂಪ್ ವೆಲ್ ಮೊದಲು ಇದನ್ನು ತಡೆಯುವ ಕೆಲಸ ಮಾಡಬೇಕಿದೆ. ಪೊಲೀಸ್ ಇಲಾಖೆ ಕೂಡ ಇತ್ತೀಚೆಗೆ ಹಲ್ಲೆ ಪ್ರಕರಣದ ತನಿಖೆ ಮಾಡುತ್ತಿದ್ದು ಎಲ್ಲಿಯೂ ಬಿರುವೆರ್
ಕುಡ್ಲದ ಹೆಸರು ಪ್ರಸ್ತಾಪವಾಗಿಲ್ಲ.
ನಮ್ಮ ಉತ್ತಮ ಸಮಾಜ ಸೇವೆ ಕಂಡು ಸಹಿಸದ ಕೆಲವು ವ್ಯಕ್ತಿಗಳು ನಮ್ಮ ಸಂಘಟನೆಗೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಬಿರುವರ್ ಕುಡ್ಲ ಇದನ್ನು ಸಹಿಸುವುದಿಲ್ಲ. ಒಂದೆರಡು ವ್ಯಕ್ತಿಗಳು ನಮ್ಮ ಸಂಘಟನೆ ಮೇಲೆ ವಿನಾಕಾರಣ ಆರೋಪ ಮಾಡಿದರೆ ಜನತೆ ನಂಬುವುದಿಲ್ಲ. ಬಿರುವೆರ್ ಕುಡ್ಲದ ಸಮಾಜ ಸೇವೆ
ಮುಂದುವರಿಯಲಿದೆ ಎಂದರು.
Kshetra Samachara
17/11/2021 01:33 pm