ಉಡುಪಿ: ಹಂಸಲೇಖರಂತಹ ದೊಡ್ಡ ಸಾಹಿತಿಯಿಂದ ಇಂತಹ ಮಾತು ನಿರೀಕ್ಷೆ ಮಾಡಿರಲಿಲ್ಲ. ಅವರು ತಮ್ಮ ಘನತೆಗೆ ತಕ್ಕ ಹಾಗೆ ಮಾತನಾಡಬೇಕು. ಅವರು ಆಡಿದ ಮಾತನ್ನು ವಾಪಸು ಪಡೆಯಬೇಕು ಎಂದು ಜಿಲ್ಲಾ ಬಿಜೆಪಿ ಆಗ್ರಹಿಸಿದೆ.
ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಹಂಸಲೇಖ ಹೇಳಿದ ತಕ್ಷಣ ಪೇಜಾವರ ಶ್ರೀಗಳ ಗೌರವ ಕಡಿಮೆಯಾಗುವುದಿಲ್ಲ. ಅವರು ತಮ್ಮ ಮಾತನ್ನು ವಾಪಸು ಪಡೆಯಬೇಕು. ಪೇಜಾವರ ಶ್ರೀಗಳು ಕೋಳಿ-ಮೀನು ತಿಂತಾರಾ ಎಂಬ ಅಸಂಬದ್ಧ ಹೇಳಿಕೆ ಹಂಸಲೇಖ ಅವರಿಂದ ನಿರೀಕ್ಷೆ ಮಾಡಿರಲಿಲ್ಲ. ಕುಂದಾಪುರದಲ್ಲಿ ನಮ್ಮ ಯುವ ಮೋರ್ಚಾ ಕಾರ್ಯಕರ್ತರು ಈ ಕುರಿತು ನಾಳೆ ಪ್ರತಿಭಟನೆ ನಡೆಸಲಿದ್ದಾರೆ ಎಂದರು.
Kshetra Samachara
15/11/2021 04:28 pm