ಉಡುಪಿ: ಇದೇ ತಿಂಗಳ 14 ನೇ ತಾರೀಕಿಗೆ ರಾಜ್ಯಮಟ್ಟದಲ್ಲಿ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ಸಿಗುತ್ತಿದ್ದು ಅಂದು ಉಡುಪಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ನ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.ಉಡುಪಿಯಲ್ಲಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು , ಸದಸ್ಯತ್ವ ನೋಂದಣಿ ಬಗ್ಗೆ ಈಗಾಗಲೇ ಮುಖಂಡರು ಮತ್ತು ಕಾರ್ಯಕರ್ತರ ಸಭೆ ನಡೆಸಿದ್ದೇವೆ. ಅದೇ ರೀತಿ 19ಕ್ಕೆ ದಿವಂಗತ ಇಂದಿರಾ ಗಾಂಧಿಯವರ ಹುಟ್ಟಿದ ದಿನ ಇದೆ.ಅವತ್ತು ಜಿಲ್ಲೆಯ ಎಲ್ಲ ಬೂತ್ ನಲ್ಲಿ ಸದಸ್ಯತ್ವ ನೋಂದಣಿ ಕಾರ್ಯ ನಡೆಯಲಿದೆ. ಅದರ ಜೊತೆಗೆ ಸ್ವಾತಂತ್ರ್ಯದ ಸುವರ್ಣಮಹೋತ್ಸವದ ವರ್ಷಾಚರಣೆ ನಡೆಸುವಂತೆ ಕೆಪಿಸಿಸಿ ನಿರ್ದೇಶನ ನೀಡಿದೆ.ಅದರ ಪ್ರಯುಕ್ತ ಕೂಡ ಪ್ರತೀ ಗ್ರಾಮದಲ್ಲೂ ಕಾರ್ಯಕ್ರಮ ನಡೆಸಿ ಪಕ್ಷ ಸಂಘಟಿಸಲಿದ್ದೇವೆ ಎಂದು ಹೇಳಿದ್ದಾರೆ.
Kshetra Samachara
12/11/2021 07:53 pm