ಉಡುಪಿ: ಸಾರ್ವಜನಿಕ ರಸ್ತೆಗೆ ಪರ್ಯಾಯ ಅದಮಾರು ಮಠದವರು ಗೇಟ್ ಅಳವಡಿಸಿ ವಿವಾದಕ್ಕೀಡಾಗಿದ್ದರು. ಬಳಿಕ ಸಾರ್ವಜನಿಕರಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈಗ ಗೇಟ್ ತೆರವು ಮಾಡಲು ಮಠದವರು ಒಪ್ಪಿದ್ದಾರೆ. ಈ ಕುರಿತು ನಗರಸಭೆ ಸದಸ್ಯ, ಕಾಂಗ್ರೆಸ್ ಮುಖಂಡ ರಮೇಶ್ ಕಾಂಚನ್ ಪ್ರತಿಕ್ರಿಯಿಸಿದ್ದಾರೆ.
"ಅದಮಾರು ಮಠದವರು ಗೇಟು ಅಳವಡಿಸಿದ ಕ್ರಮವನ್ನು ನಗರಸಭೆ ಮೀಟಿಂಗ್ ನಲ್ಲಿ ಪ್ರಸ್ತಾಪ ಮಾಡಿದ್ದೇನೆ. ಬಳಿಕ ಆ ಗೇಟನ್ನು ತೆರವುಗೊಳಿಸುವ ತೀರ್ಮಾನ ಮಾಡಿದ್ದಾರೆ. ಇದು ಅಧಿಕಾರಿಗಳಿಗೊಂದು ಪಾಠ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಎಲ್ಲರಿಗೂ ಸರಿಸಮಾನ ಕಾನೂನು ಜಾರಿಗೆ ತರುವಂತಾಗಬೇಕು" ಎಂದವರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
02/11/2021 07:00 pm