ಉಡುಪಿ: ಉಪಚುನಾವಣೆ ಫಲಿತಾಂಶದಿಂದ ಖುಷಿಗೊಂಡಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾನಗಲ್ ನಲ್ಲಿ ಬಿಜೆಪಿ ಸೋಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾದ ಮುಖಭಂಗ ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡರು, ಬಹಳ ಸಮಯದ ಬಳಿಕ ಕಾಂಗ್ರೆಸ್ ವಿಜಯೋತ್ಸವ ಮಾಡುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಲಿದೆ. ಬಿಜೆಪಿಯ ಮುಖ್ಯಮಂತ್ರಿ ಮತ್ತು ಇಡೀ ಸಚಿವ ಸಂಪುಟ ಠಿಕಾಣಿ ಹೂಡಿದರೂ ಹಾನಗಲ್ ನಲ್ಲಿ ಸೋಲುಂಡಿದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೊಸ ಚೈತನ್ಯ ಬಂದಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
02/11/2021 02:58 pm