ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ನಗರಸಭೆಯ ಸಾಮಾನ್ಯ ಸಭೆಯಲ್ಲಿ "ಕಡತಗಳ ಮಾಯ"ಕುರಿತು ಬಿಸಿಯೇರಿದ ಚರ್ಚೆ!

ಉಡುಪಿ: ನಗರಸಭೆಯ ಸಾಮಾನ್ಯ ಸಭೆ ಇಂದು ಅಧ್ಯಕ್ಷೆ ಸುಮಿತ್ರಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಪ್ರಭಾಕರ ಪೂಜಾರಿ ಇ ಖಾತೆ ಮಾಯ ಆಗುತ್ತಿರುವ ಬಗ್ಗೆ ಸದನದ ಗಮನ ಸೆಳೆದರು. ಇದಕ್ಕೆ ಹೆಚ್ವಿನ ಸದಸ್ಯರು ಸಹಮತ ವ್ಯಕ್ತಪಡಿಸಿ ತಮ್ಮ ವಾರ್ಡ್ ಗಳಲ್ಲೂ ಸಾರ್ವಜನಿಕರ ಕಡತ ಮಾಯವಾಗಿದೆ ಎಂದು ಆರೋಪಿಸಿದರು. ಇದೊಂದು ಗಂಭೀರ ವಿಷಯವಾಗಿದ್ದು ಕಡತಗಳು ಯಾಕೆ ಮಾಯವಾಗುತ್ತಿವೆ ಎಂಬುದರ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಸದಸ್ಯರು ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು ಕಡತ ಮಾಯವಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಪೇಪರ್ಲೆಸ್ ವ್ಯವಸ್ಥೆ ಬಂದರೆ ಇಂತಹ ಸಮಸ್ಯೆಗೆ ಮುಕ್ತಿ ಸಿಗಬಹುದು. ದಿನವೊಂದರಲ್ಲಿ ನೂರಕ್ಕೂ ಹೆಚ್ಚು ಇ ಖಾತೆಗಳು ಬರುತ್ತಿದ್ದು ಅದರಲ್ಲಿ 20ರಿಂದ 25 ಫೈಲ್ ಗಳನ್ನು ಮಾತ್ರ ವಿಲೇವಾರಿ ಮಾಡಬಹುದು. ಇದರಿಂದ ಇಂತಹ ಸಮಸ್ಯೆ ಉದ್ಭವವಾಗುತ್ತದೆ ಎಂದು ಅಧಿಕಾರಿಗಳು ಸಮಜಾಯಿಸಿ ನೀಡಿದರು.

ವಾರಾಹಿ ನದಿ ನೀರಿನ ಪೈಪ್ ಜೋಡಣೆ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳನ್ನು ಅಗೆದು ಹಾಳು ಮಾಡಲಾಗಿದ್ದು ಇದರ ವಿರುದ್ಧ ಕೂಡ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಕೃಷ್ಣಮಠ ಪರ್ಯಾಯ ಮುಗಿಯುವವರೆಗೆ ನಗರದ ಯಾವುದೇ ರಸ್ತೆಯನ್ನು ಆಗೆಯಬಾರದೆಂದು ಸದಸ್ಯೆ ಅಮೃತಾ ಕೃಷ್ಣಮೂರ್ತಿ, ರಮೇಶ್ ಕಾಂಚನ್ ಸೇರಿದಂತೆ ಇತರ ಸದಸ್ಯರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಪರ್ಯಾಯ ಮುಗಿಯುವವರೆಗೆ ಯಾವುದೇ ರಸ್ತೆಯನ್ನು ಆಗೆಯಬಾರದೆಂದು ಅಧಿಕಾರಿಗಳಿಗೆ ಸೂಚಿಸಿದರು.

ಉಳಿದಂತೆ, ಬ್ಯಾನರ್ ತೆರವು ವಿಚಾರ ಹಾಗೂ ಗೂಡ ಅಂಗಡಿಗಳಿಗೆ ನೀಡಿರುವ ಪರವಾನಿಗೆಯ ಕುರಿತು ಸಾಮಾನ್ಯಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು.

Edited By : Shivu K
Kshetra Samachara

Kshetra Samachara

29/10/2021 06:10 pm

Cinque Terre

7.71 K

Cinque Terre

0

ಸಂಬಂಧಿತ ಸುದ್ದಿ