ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸಚಿವ ಡಾ.ಅಶ್ವಥ್ ನಾರಾಯಣ ಬೈಂದೂರು ಸರಕಾರಿ ಐ.ಟಿ.ಐ ಕಾಲೇಜಿಗೆ ಭೇಟಿ

ಬೈಂದೂರು: ಉನ್ನತ ಶಿಕ್ಷಣ,ಕೌಶಲ್ಯಾಭಿವೃದ್ಧಿ ,ಐಟಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವಥ್ ನಾರಾಯಣ ಇಂದು ಬೈಂದೂರು ಸರಕಾರಿ ಐ.ಟಿ.ಐ ಕಾಲೇಜಿಗೆ ಭೇಟಿ ನೀಡಿದರು.

ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಐ.ಟಿ.ಐ ಕಾಲೇಜಿನ ಕಟ್ಟಡ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗ ಸೇರಿದಂತೆ ಸ್ಥಳೀಯವಾಗಿ ಕೌಶಲ್ಯಭರಿತ ತರಬೇತಿ ಪಡೆದ ಯುವ ಸಮುದಾಯ ನಿರ್ಮಾಣದ ಜೊತೆಗೆ ಗುಣಮಟ್ಟದ ಶಿಕ್ಷಣ ತರಬೇತಿ ಮೂಲಕ ಅತ್ಯುತ್ತಮ ಸಂಸ್ಥೆಗಳನ್ನು ಆರಂಭಿಸುವ ಉದ್ದೇಶದಿಂದ ಸರಕಾರ ವಿಶ್ವ ದರ್ಜೆಯ ಐ.ಟಿ.ಐ ಕಾಲೇಜುಗಳನ್ನು ಆರಂಭಿಸುತ್ತಿದೆ.ಭವಿಷ್ಯದ ಬೇಡಿಕೆ ಆಧಾರದಲ್ಲಿ ಹೊಸದಾದ 11 ಕೋರ್ಸ್‌ಗಳು ಆರಂಭವಾಗಲಿದ್ದು ಅವುಗಳಲ್ಲಿ ಆರು ವಿಷಯಗಳು ಎರಡು ವರ್ಷ ಹಾಗೂ ಐದು ವಿಷಯಗಳು ಒಂದು ವರ್ಷದ ಅವಧಿಯದ್ದಾಗಿದೆ. ಈ ಕಟ್ಟಡದ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕಿದೆ ಎಂದರು.

ಇದಕ್ಕೂ ಮುನ್ನ ಸಚಿವರನ್ನು ಸ್ಥಳೀಯ ಶಾಸಕ ಸುಕುಮಾರ್ ಶೆಟ್ಟಿ ಮತ್ತು ಬಿಜೆಪಿ ನಾಯಕರು ಅತ್ಮೀಯವಾಗಿ ಸ್ವಾಗತಿಸಿದರು.

Edited By : Manjunath H D
Kshetra Samachara

Kshetra Samachara

23/10/2021 06:07 pm

Cinque Terre

12.33 K

Cinque Terre

1

ಸಂಬಂಧಿತ ಸುದ್ದಿ