ಮಂಗಳೂರು: ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಉಪಚುನಾವಣೆ ಬಂದಿತ್ತು. ಆಗ ಅವರು ಗೋಣಿಯಲ್ಲಿ ಹಂಚಿದ್ದಾರೆ ಅಂತ ನಾವು ಟೀಕೆ ಮಾಡಿದ್ದೇವೆ. ರಾಜಕೀಯದಲ್ಲಿ ಟೀಕೆ ಸಹಜ. ಆದರೆ, ಮತ ಹಾಕೋರು ಜನರು ಎಂದು ಮಂಗಳೂರಲ್ಲಿ ಸಚಿವ ಎಸ್.ಅಂಗಾರ ಹೇಳಿದರು.
ಬಿಜೆಪಿ ಆಡಳಿತದಲ್ಲಿ ಯಾವ ರೀತಿ ಅಭಿವೃದ್ಧಿ ಆಗಿದೆ ಅನ್ನೋದು ಜನರಿಗೆ ಗೊತ್ತಿದೆ. ಸಿಂದಗಿ, ಹಾನಗಲ್ ಮಾತ್ರವಲ್ಲ, ಎಲ್ಲ ಕಡೆಯಲ್ಲೂ ಅಭಿವೃದ್ಧಿ ಆಗಿದೆ. ರಾಜಕೀಯವಾಗಿ ಟೀಕೆ ಮಾಡೋದು ಒಂದು ಭಾಗ. ಆದರೆ, ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಬೇಕು. ವೈಯಕ್ತಿಕ ಟೀಕೆಗಳು ಅವರವರ ಗುಣಮಟ್ಟ, ಅವರವರ ಅಭಿಪ್ರಾಯ. ಜನ ಇದನ್ನು ತೀರ್ಮಾನ ಮಾಡ್ತಾರೆ ಎಂದರು.
ಜನ ಇಂತಹ ಮಾತನ್ನು ಕೇಳೋಕೆ ರೆಡಿಯಿಲ್ಲ. ಆರ್ ಎಸ್ ಎಸ್ ಏನು ಅನ್ನೋದು ನನಗೆ ಆರನೇ ತರಗತಿಯಿಂದ ಗೊತ್ತಿದೆ. ಯಾವ ಯಾವ ವಿಷಯಗಳ ಸಂಸ್ಕಾರ ಬೇಕು ಅಂತ ಸಂಘದಲ್ಲಿ ಕಲಿಯಬಹುದು. ಕುಮಾರಸ್ವಾಮಿಯವರು ಕೂಡ ಯೋಚನೆ ಮಾಡಬೇಕು. ಇದರಿಂದ ಕುಮಾರಸ್ವಾಮಿಯವರ ವ್ಯಕ್ತಿತ್ವದ ಬಗ್ಗೆಯೇ ಜನ ಸಂಶಯ ಪಡ್ತಾರೆ.
ಇದರಿಂದ ಸಂಘಕ್ಕೆ ಏನೂ ಆಗಲ್ಲ, ಸಂಘ ಪ್ರತಿನಿತ್ಯ ಬೆಳೆಯುತ್ತದೆ. ಆರ್ ಎಸ್ ಎಸ್ ನ್ನು ಟೀಕೆ ಮಾಡುವುದರ ಬಗ್ಗೆ ನಾವು ತಲೆ ಕೆಡಿಸಲ್ಲ ಎಂದರು.
Kshetra Samachara
22/10/2021 02:59 pm