ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು- ರಾ.ಹೆ. ಪ್ರಾಧಿಕಾರ ಒಡಂಬಡಿಕೆ

ಮೂಡುಬಿದಿರೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ನಡುವೆ ತಾಂತ್ರಿಕ ಒಡಂಬಡಿಕೆ ನಡೆದಿದೆ.

ಒಡಂಬಡಿಕೆ ಪ್ರಕಾರ ಗೋವಾ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದಿಂದ ಮುರ್ಡೇಶ್ವರದವರೆಗೆ 73 ಕಿ.ಮೀ. ಉದ್ದದ ಹೆದ್ದಾರಿಯ ದತ್ತು ಸ್ವೀಕಾರ ಮತ್ತು ಮಂಗಳೂರು ನಗರ ಹೊರವಲಯದ ಮುಲ್ಕಿ, ಕಿನ್ನಿಗೋಳಿ, ಮೂರುಕಾವೇರಿ, ಬಜಪೆ, ಕೈಕಂಬ, ಪೊಳಲಿ, ಕಲ್ಪನೆ, ಬಿ.ಸಿ. ರೋಡು ಪಾಣೆಮಂಗಳೂರು ಹಾಗೂ ತೊಕ್ಕೊಟ್ಟು ಸೇರಿ ಸಿಟಿ ಬೈಪಾಸ್ ಯೋಜನೆ ಒಡಂಬಡಿಕೆಯಲ್ಲಿ ಒಳಗೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸಾರಿಗೆ ಹಾಗೂ ಹೆದ್ದಾರಿ ವಿಷಯವಾಗಿ ಇತ್ತೀಚಿನ ತಾಂತ್ರಿಕ ಬೆಳವಣಿಗೆ ತಿಳಿಯಲು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಅವಕಾಶ ಸಿಗಲಿದೆ. ದತ್ತು ಪಡೆದ ಹೆದ್ದಾರಿ ಉದ್ದಗಲಕ್ಕೂ ಕಾಲಕಾಲಕ್ಕೆ ತಾಂತ್ರಿಕ ಅಧ್ಯಯನ ನಡೆಸಿ ಹೆದ್ದಾರಿ ಬೆಳವಣಿಗೆ ಬಗ್ಗೆ ಹೆದ್ದಾರಿ ಇಲಾಖೆಗೆ ಸೂಕ್ತ ಸಲಹೆ ನೀಡಲಾಗುವುದು. ಹೆದ್ದಾರಿ ಕಾಮಗಾರಿಗಳನ್ನು ಶೈಕ್ಷಣಿಕ ಭೇಟಿ ಮೂಲಕ ಪ್ರಾಯೋಗಿಕವಾಗಿ ಕಲಿಯಲು ಅವಕಾಶ ಜತೆಗೆ ವಿದ್ಯಾರ್ಥಿಗಳಿಗೆ ಶಿಷ್ಯಭತ್ಯೆ ಸಹಿತ ಇಂಟರ್ನ್ ಶಿಪ್, ಆಳ್ವಾಸ್‌ನಲ್ಲಿ ಸುಸಜ್ಜಿತ ಸಂಶೋಧನಾಧಾರಿತ ಪ್ರಯೋಗಾಲಯ ನಿರ್ಮಾಣ, ಹೆದ್ದಾರಿ ಕಾಮಗಾರಿಗೆ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಕಂಪೆನಿಯ ಎಂಜಿನಿಯರ್‌ಗಳೊಂದಿಗೆ ಭೇಟಿ, ತಾಂತ್ರಿಕ ವಿಷಯಗಳ ವಿನಿಮಯ ಮತ್ತು ವೃತ್ತಿಪರ ಸಂಬಂಧ ಬೆಳೆಸಲು ಈ ಒಡಂಬಡಿಕೆ ನೆರವಾಗಲಿದೆ ಎಂದರು.

ಆಳ್ವಾಸ್ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ವಿಭಾಗ ಮುಖ್ಯಸ್ಥ ಅಜಿತ್ ಹೆಬ್ಬಾರ್, ಪ್ರೊ.ವರದರಾಜ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

21/10/2021 07:06 pm

Cinque Terre

12.52 K

Cinque Terre

0

ಸಂಬಂಧಿತ ಸುದ್ದಿ