ಮಂಗಳೂರು: ಮಂಗಳೂರು ಹೊರವಲಯದ ಬೊಂದೇಲ್- ಪಚ್ಚನಾಡಿ ಸಂಪರ್ಕಿಸುವ ಮಧ್ಯ ಭಾಗದಲ್ಲಿ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿ ಬಹುತೇಕ ಮುಗಿದಿದ್ದು, ಮುಂದಿನ ಹಂತವಾಗಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಒಂದು ಬದಿಯ ರಸ್ತೆ ಕಾಂಕ್ರೀಟಿಕರಣ ಕಾರ್ಯವು ಪ್ರಗತಿಯಲ್ಲಿದೆ. ಅ. 10ರಿಂದ ಇನ್ನೊಂದು ಬದಿಯ ರಾಜಕಾಲುವೆವರೆಗೆ ರಸ್ತೆ ಕಾಮಗಾರಿಗಾಗಿ ಮುಖ್ಯ ರಸ್ತೆಯನ್ನು ಒಂದು ತಿಂಗಳ ಅವಧಿಗೆ ತಾತ್ಕಾಲಿಕವಾಗಿ ಮುಚ್ಚಲಾಗುತ್ತಿದ್ದು, ಈ ಸಂಬಂಧ ಮಾಹಿತಿ ಪಡೆಯಲು ಹಾಗೂ ಕಾಮಗಾರಿ ಪರಿಶೀಲಿಸಲು ಸ್ಥಳಕ್ಕೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ. ಭರತ್ ಶೆಟ್ಟಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.
ಮಂಡಲ ಪ್ರಧಾನ ಕಾರ್ಯದರ್ಶಿ ಸಂದೀಪ್ ಬೊಂದೇಲ್, ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್ ನಾಯಕ್ ಕಾರ್ಪೋರೇಟರ್ ಕಿರಣ್ ಕುಮಾರ್ ಕೋಡಿಕಲ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ರಾಮ ಅಮೀನ್ ಪಚ್ಚನಾಡಿ, ಶಿವಾಜಿ ಕುಲಾಲ್, ಬಾಲಕೃಷ್ಣ ಕುಕ್ಯಾನ್, ಜಗದೀಶ್ ಮುಂಡ ಪೂಜಾರಿ, ವಿಲ್ಫ್ರೆಡ್, ಮತ್ತಿತರರು ಸಾಥ್ ನೀಡಿದರು. ರೈಲ್ವೇ ಅಧಿಕಾರಿಗಳು, ನಗರಪಾಲಿಕೆ ಎಂಜಿನಿಯರ್‌ಗಳು, ಗುತ್ತಿಗೆದಾರರು ಹಾಜರಿದ್ದು ಉಪಯುಕ್ತ ಮಾಹಿತಿ ನೀಡಿದರು.
ವ್ಯವಸ್ಥಿತ ಕಾಮಗಾರಿಗೆ ಶಾಸಕರು ಸೂಚನೆ ನೀಡಿದರು. ಅಲ್ಲದೆ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರರಿಗೆ ತೊಂದರೆ ಆಗದಂತೆ ಕ್ರಮವಹಿಸಿದ ಬದಲಿ ಮಾರ್ಗವನ್ನು ಪರಿಶೀಲಿಸಿದರು.
Kshetra Samachara
09/10/2021 06:15 pm