ಪುತ್ತೂರು: ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ಅವರು ತಮ್ಮ ರಾಜಕೀಯ ಗುರು ಮಾಜಿ ಶಾಸಕ ಉರಿಮಜಲು ರಾಮ ಭಟ್ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ವಿ. ಸದಾನಂದ ಗೌಡ ಅವರು, ನನ್ನನ್ನು ಸುಳ್ಯದಲ್ಲಿ ಪಕ್ಷದ ಅಧ್ಯಕ್ಷನನ್ನಾಗಿ, ಪುತ್ತೂರಿನಲ್ಲಿ ಶಾಸಕರನ್ನಾಗಿ ಮಾಡಿದವರು ರಾಮ್ ಭಟ್. ಅವರ ಪ್ರಯತ್ನದ ಫಲವಾಗಿ ರಾಜಕಾರಣದಲ್ಲಿ ಇವತ್ತು ಇಷ್ಟೆಲ್ಲ ನಾವು ಬೆಳೆಯಲು ಕಾರಣವಾಗಿದೆ. ಇವತ್ತು ಕೂಡ ಅವರು ಹಾಕಿ ಕೊಟ್ಟ ಮಾರ್ಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಲು ಕಾರಣವಾಗಿದೆ. ದೇಶ ಮೊದಲು ಎಂಬ ಒತ್ತನ್ನು ನೀಡಲು 1975ರ ದಶಕದಲ್ಲೇ ರಾಮ್ ಭಟ್ ಅವರು ನೀಡಿದ್ದಾರೆ. ಇವತ್ತು ನಾವೆಲ್ಲ ಅದನ್ನು ಪಾಲನೆ ಮಾಡುತ್ತಿದ್ದೇವೆ. ಈ ದೃಷ್ಟಿಯಿಂದ ದೇಶದಲ್ಲಿ ಬಿಜೆಪಿ ಅಧಿಕಾರ ಬರಲು ಸಾಧ್ಯವಾಗಿದೆ ಎಂದರು.
ಜನಸಂಘದ ಕಾಲದಿಂದ ಉರಿಮಜಲು ರಾಮ ಭಟ್ ಅವರು ಹುಟ್ಟು ಹಾಕಿದ ಗಿಡ ಇವತ್ತು ಇಡೀ ದೇಶದ ಜನರಿಗೆ ಆಶ್ರಯ ನೀಡುತ್ತಿದೆ. ಅವರು ಅನಾರೋಗ್ಯದಲ್ಲಿರುವ ಕುರಿತು ಮಾಹಿತಿ ಪಡೆದು ಬಂದು ಅವರ ಆರೋಗ್ಯ ವಿಚಾರಿಸಿದ್ದೇನೆ. ಅವರಿಗೆ ದೇವರು ಉತ್ತಮ ಆರೋಗ್ಯ ಕೊಡಲಿ ಎಂದು ಹೇಳಿದರು.
Kshetra Samachara
09/10/2021 05:04 pm