ಮುಲ್ಕಿ: ಕುಗ್ರಾಮವಾಗಿದ್ದ ಪಂಜದಲ್ಲಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಿ ನಂತರದ ದಿನದಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಂಜದ ಗ್ರಾಮಸ್ಥರಿಗೆ ದೊರಕಿಸಿಕೊಡುವಲ್ಲಿ ಮಹತ್ತರ ಪಾತ್ರವಹಿಸಿದ ಪಂಜದ ಗುತ್ತು ದಿ.ಶಾಂತರಾಮ ಶೆಟ್ಟಿ ಅವರ ಆದರ್ಶಗಳೇ ದಾರಿದೀಪ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ದಿ.ಪಂಜದ ಗುತ್ತು ಶಾಂತರಾಮ್ ಶೆಟ್ಟಿ ಅವರ ಮನೆಗೆ ವೀರಪ್ಪ ಮೊಯ್ಲಿ ಅವರು ಭೇಟಿ ನೀಡಿ ಸಾಂತ್ವನ ನುಡಿದರು. ಈ ವೇಳೆ ಮಾಜಿ ಸಚಿವ ಕೆ.ಅಭಯಚಂದ್ರ, ಕೆಪಿಸಿಸಿ ಕಾರ್ಯದರ್ಶಿ ಜಿಎ ಭಾವ, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬೆರ್ನಾಡ್, ಮಾಜಿ ಮೇಯರ್ ಶಶಿಧರ ಹೆಗ್ಡೆ ಇದ್ದರು.
Kshetra Samachara
09/10/2021 04:11 pm