ಕದ್ರಿ ಪದವು: ಮಂಗಳೂರು ನಗರ ಉತ್ತರ ಮಂಡಲದ ಕದ್ರಿ ಪದವು ವಾರ್ಡ್ 22ರ ಬೂತ್ ಅಧ್ಯಕ್ಷರ ನಾಮಫಲಕ ಕಾರ್ಯಕ್ರಮದ ಸಂದರ್ಭದಲ್ಲಿ ಜನಸಾಮಾನ್ಯರೊಬ್ಬರು ನೀಡಿದ ಹಕ್ಕುಪತ್ರದ ಮನವಿಯನ್ನು ತಕ್ಷಣ ಪರಿಶೀಲಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ಕೇವಲ ಎರಡೇ ದಿನಗಳಲ್ಲಿ ಹಕ್ಕುಪತ್ರ ಸಿಗುವಂತೆ ಮಾಡಿದ್ದಾರೆ.
ಹಲವಾರು ವರ್ಷಗಳಿಂದ ಬಾಕಿ ಇದ್ದ ಹಕ್ಕು ಪತ್ರದ ಬೇಡಿಕೆಯನ್ನು ಸ್ಥಳೀಯರು ಮನವಿ ನೀಡಿದ ತಕ್ಷಣ ಪರಿಶೀಲಿಸಿ ಶೀಘ್ರವಾಗಿ ಸ್ಪಂದಿಸಿದ ಶಾಸಕರಿಗೆ ಕದ್ರಿ ಪದವು ವಾರ್ಡಿನ ನಾಗರಿಕರು, ಸ್ಥಳೀಯ ಮನಪಾ ಸದಸ್ಯರಾದ ಜಯಾನಂದ ಅಂಚನ್ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
06/10/2021 07:18 am