ಮುಲ್ಕಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಹಾತ್ವಕಾಂಕ್ಷೆಯ ಯೋಜನೆ ಬೂತ್ ಅಧ್ಯಕ್ಷರ ನಾಮಪಲಕ ಅನಾವರಣ ಕಾರ್ಯಕ್ರವಾಗಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಕಿನ್ನಿಗೋಳಿ ಸಮೀಪದ ಅತ್ತೂರು, ನಡುಗೋಡು ಕೆಮ್ರಾಲ್, ಕಿಲೆಂಜೂರು, ಕಟೀಲು ಮತ್ತಿತರ ಒಟ್ಟು 23 ಬೂತ್‌ಗಳಲ್ಲಿ ನಾಮಫಲಕ ಅನಾವಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಜನರ ಆಶೀರ್ವಾದದಿಂದ ಮುಲ್ಕಿ ಮೂಡಬಿದರಿಯಲ್ಲಿ ಬಿಜೆಪಿ ಶಾಸಕರನ್ನು ಕಾಣುವಂತಾಯಿತು. ಮುಂದಿನ ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಈಗಲೇ ತಯಾರಾಗಬೇಕು" ಎಂದರು.
ಈ ಸಂದರ್ಭ ಮಂಡಲಾಧ್ಯಕ್ಷ ಸುನೀಲ್ ಅಳ್ವ, ಕಟೀಲು ಶಕ್ತಿಕೇಂದ್ರ ಕಾರ್ಯದರ್ಶಿ ಸುದೀಪ್ ಅಮೀನ್, ಅರುಣ್ ಮಲ್ಲಿಗೆಯಂಗಡಿ, ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
27/09/2021 10:09 pm