ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಭಾರತ್ ಬಂದ್ ಗೆ ಬೆಂಬಲ : ಉಡುಪಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಉಡುಪಿ: ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಹಿನ್ನಲೆ ಇವತ್ತು ಉಡುಪಿಯಲ್ಲಿ ಬಂದ್ ಬೆಂಬಲಿಸಿ ಪ್ರತಿಭಟನಾ ಮೆರವಣಿಗೆ ನಡೆಯಿತು.ನಗರದ ಜೋಡುಕಟ್ಟೆಯಿಂದ ಹುತಾತ್ಮರ ಸ್ಮಾರಕದವರೆಗೆ ಮೆರವಣಿಗೆ ನಡೆಸಿದ ವಿವಿಧ ಸಂಘಟನೆಗಳು

ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದವು.

ಖಾಸಗೀಕರಣ ,ರೈತ ವಿರೋಧಿ ಮಸೂದೆ ಮೂಲಕ ಕೇಂದ್ರ,ರಾಜ್ಯ ಸರಕಾರ ಜನ ವಿರೋಧಿ ನೀತಿ ನುಸರಿಸುತ್ತಿವೆ.ಜನವಿರೋಧಿ ಕಾಯ್ದೆಗಳನ್ನು ಹಿಂಪಡೆಯುವತನಕ ಹೋರಾಟ ಮಾಡಲಾಗುವುದು ಎಂದ ಪ್ರತಿಭಟನಕಾರರು ಕೇಂದ್ರ ,ರಾಜ್ಯ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಎಡಪಕ್ಷಗಳು ,ಕಾಂಗ್ರೆಸ್ ,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯಿಂದ ಬೆಂಬಲ ಸೂಚಿಸಿದ್ದವು.ಎಡಪಕ್ಷಗಳಿಂದ ಭಾರೀ ಸಂಖ್ಯೆಯ ಮಹಿಳೆಯರು ,ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

27/09/2021 12:16 pm

Cinque Terre

11.7 K

Cinque Terre

9

ಸಂಬಂಧಿತ ಸುದ್ದಿ