ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 71 ನೇ ಹುಟ್ಟು ಹಬ್ಬದ ಅಂಗವಾಗಿ ಮೋದಿ ಅಭಿಮಾನಿ ಚಂದ್ರ ಮಲ್ಲಾರ್ ಇವರ ವತಿಯಿಂದ ಕಾಪು ವ್ಯಾಪ್ತಿಯಲ್ಲಿ ಸುಮಾರು 5 ಕಿಲೋ ಮೀಟರ್ ವರೆಗೆ ಉಚಿತ ಆಟೋ ಸೇವೆ ಹಮ್ಮಿ ಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀ ಕಾಂತ್ ನಾಯಕ್ ಚಾಲನೆ ನೀಡಿದರು.
ಈ ಸಂದರ್ಭ ಚಂದ್ರ ಮಲ್ಲಾರ್ ಮಾತಾನಾಡಿ ಮೋದಿಯವರ ದೊಡ್ಡ ಅಭಿಮಾನಿಯಾಗಿದ್ದು ಜನರ ಸೇವೆ ಮಾಡುತ್ತಿರುವ ಮೋದಿಯವರ ಕಾರ್ಯ ವೈಖರಿಯನ್ನು ಮೆಚ್ಚಿ ಅವರ ಹುಟ್ಟು ಹಬ್ಬದಂದು ಸಾರ್ವಜನಿಕರಿಗೆ ತನ್ನಿಂದ ಅಲ್ಪ ಮಟ್ಟಿನ ಸೇವೆ ನೀಡುವ ನಿಟ್ಟಿನಲ್ಲಿ ಕಾಪು ಪೇಟೆಯಿಂದ 5 ಕಿಲೋ ಮೀಟರ್ ವರೆಗೆ ಇಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೆ ಉಚಿತ ಸೇವೆ ನೀಡುತ್ತಿದ್ದೇನೆ ಎಂದರು.
Kshetra Samachara
17/09/2021 01:50 pm