ಬ್ರಹ್ಮಾವರ: ಹಂದಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಟಪಾಡಿ ಗ್ರಾಮದ ಕೊರಗರ ಕಾಲೋನಿಗೆ ಶಾಸಕ ಕೆ. ರಘುಪತಿ ಭಟ್ ಅವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿಗೆ ದಾಖಲಾಗಲು ಆಸಕ್ತಿ ತೋರದ ವಿದ್ಯಾರ್ಥಿಯನ್ನು ಕಾಲೇಜಿಗೆ ದಾಖಲಾಗುವಂತೆ ಆತನ ಮನವೊಲಿಸಿದರು. ಬಳಿಕ ಮಟಪಾಡಿ ಗ್ರಾಮದ ಬಲ್ಜಿಯಲ್ಲಿ 20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ "ಕೊರಗರ ಸಮುದಾಯ ಭವನ"ದ ಕಾಮಗಾರಿಯನ್ನು ಪರಿಶೀಲಿಸಿದರು.
ಹಂದಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಪೂಜಾರಿ, ಉಪಾಧ್ಯಕ್ಷರಾದ ಶೋಭಾ ಪೂಜಾರಿ, ಬ್ರಹ್ಮಾವರ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸುಧೀರ್ ಶೆಟ್ಟಿ, ಪಕ್ಷದ ಪ್ರಮುಖರಾದ ಮೋಹನ್ ಶೆಟ್ಟಿ, ಕೊರಗರ ಮುಖಂಡರಾದ ಗಣೇಶ್, ಗಣೇಶ್ ಬಾರ್ಕೂರು, ಗುತ್ತಿಗೆದಾರರಾದ ಎಸ್. ನಾರಾಯಣ್ ಉಪಸ್ಥಿತರಿದ್ದರು.
Kshetra Samachara
24/08/2021 04:40 pm