ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳಾಯಿಬೆಟ್ಟು: ವಿವಿಧ ಯೋಜನೆಗಳಿಗೆ ಡಾ. ಭರತ್ ಶೆಟ್ಟಿ ಚಾಲನೆ

ಕೈಕಂಬ: ಉಳಾಯಿಬೆಟ್ಟು ವಸಂತ ಗ್ರಾಮ ವಿಕಾಸ ಸಮಿತಿ ಹಾಗೂ ಸಂಸ್ಥೆಗಳ ಸಹಯೋಗದೊಂದಿಗೆ ಉಳಾಯಿಬೆಟ್ಟು ಗ್ರಾ.ಪಂ ಮಾಜಿ ಅಧ್ಯಕ್ಷ ದಿ. ವಸಂತ ಕುಮಾರ್ ಪೆರ್ಮಂಕಿ ಅವರ ಪ್ರಥಮ ಪುಣ್ಯ ಸ್ಮರಣೆ ಅಂಗವಾಗಿ ವಿವಿಧ ಜನೋಪಯೋಗಿ ಕಾರ್ಯಕ್ರಮಗಳನ್ನು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಲೋಕಾರ್ಪಣೆಗೊಳಿಸಿದರು.

ಶ್ರೀ ಮಹಾಮಾಯಾ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದಿ ವಸಂತ ಕುಮಾರ್ ಪೆರ್ಮಂಕಿ ಹಾಗೂ ದಿ ಆನಂದ ಶೆಟ್ಟಿ ಸಲ್ಲಾಜೆ ಅವರ ಸ್ಮರಣಾರ್ಥ ಉಚಿತ ಅಂಬುಲೆನ್ಸ್ ಸೇವೆಗೆ ಪೆರ್ಮಂಕಿ ಶ್ರೀ ಸದಾಶಿವ ದೇವಸ್ಥಾನ ವಠಾರದಲ್ಲಿ ಶಾಸಕರು ಚಾಲನೆ ನೀಡಿದರು. ದಿ ವಸಂತ ಕುಮಾರ್ ಅವರ ಸ್ಮರಣಾರ್ಥ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಎದುರು ಬಸ್ ನಿಲ್ದಾಣ, ಕಾಯರ್ ಪದವು ಸದಾಶಿವ ನಗರಕ್ಕೆ ಹೋಗುವ ರಸ್ತೆಗೆ ವಸಂತ ಕುಮಾರ್ ರಸ್ತೆ ಎಂದು ನಾಮಕರಣ, ಬಡ ಮಹಿಳೆಗೆ ಮನೆ ಹಸ್ತಾಂತರವನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ಮಾಡಿ ಇದಕ್ಕೆ ಸಹಕರಿಸಿದ ಎಲ್ಲಾ ಸಂಘಟನೆಗಳಿಗೆ, ಸಂಘ, ಸಂಸ್ಥೆಗಳಿಗೆ ಶುಭ ಹಾರೈಸಿದರು.

Edited By : PublicNext Desk
Kshetra Samachara

Kshetra Samachara

22/08/2021 06:31 pm

Cinque Terre

5.13 K

Cinque Terre

0

ಸಂಬಂಧಿತ ಸುದ್ದಿ