ಮಂಗಳೂರು: ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಅತಿಕಾರಿಬೆಟ್ಟುವಿನ ಪ್ರದೇಶದಲ್ಲಿ ಬಿಜೆಪಿಯ ಪ್ರಭಾವನ್ನು ಮಟ್ಟಹಾಕಿ ಮತ್ತೊಮ್ಮೆ ಕಾಂಗ್ರೆಸ್ಸನ್ನು ಬಾನೆತ್ತರಕ್ಕೆ ಏರಿಸುವ ಸಂಕಲ್ಪ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಸಮಯವನ್ನು ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಕರೆ ನೀಡಿದ್ದಾರೆ.
ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಾರದಾ ವಸಂತ್ ಅವರ ಮನೆಯ ವಠಾರದಲ್ಲಿ ಇಂದು ನಡೆದ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಕಾರ್ಯಕರ್ತರ ಅಭಿಪ್ರಾಯದಂತೆ ಅತಿಕಾರಿಬೆಟ್ಟು ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಪ್ರಜಾಪ್ರತಿನಿಧಿ ಅಧ್ಯಕ್ಷರಾಗಿ ಶೇಖರ ಕೊಲಕಾಡಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸರಿತಾ ರೊಡ್ರಿಗಸ್ ಜೊತೆ ಕಾರ್ಯದರ್ಶಿಯಾಗಿ ಹರಿಣಾಕ್ಷಿ ಅಧಿಕಾರ ಸ್ವೀಕರಿಸಿದರು.
ವೇದಿಕೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋಆರ್ಡಿನೇಟರ್ ವಸಂತ ಬರ್ನಾಡ್, ಊರಿನ ಗಣ್ಯರಾ ದ ರಾಮದಾಸ್ ಶೆಟ್ಟಿ, ಶಾಂತಾರಾಮ ಹೆಗಡೆ , ಉಮೇಶ್ ಕರ್ಕೆರ, ವಸಂತ ಟಿ ಅಮೀನ್, ಅಣ್ಣು ಕೋಟ್ಯಾನ್ , ಗಿರೀಶ್ ಅಂಚನ್ ಸೀಮಂತೂರು, ನಿತೇಶ್ ಕೊಲಕಾಡಿ, ದಿನೇಶ್ ನಡಿ ಕೊಪ್ಪಳ ಇದ್ದರು.
Kshetra Samachara
22/08/2021 05:27 pm