ಉಡುಪಿ: ಕೊರೋನಾ ಮೂರನೇ ಅಲೆಯ ಆತಂಕ ಕೂಡಾ ಕಣ್ಣ ಮುಂದೆ ಇದೆ.
ಧಾರ್ಮಿಕ ಆಚರಣೆ ಮತ್ತು ಆರೋಗ್ಯ ಎರಡೂ ಮುಖ್ಯ. ಈ ಬಗ್ಗೆ ಸರಕಾರ ಒಂದು ಸೂತ್ರವನ್ನು ಸಿದ್ಧಪಡಿಸಲಿದೆ.ಗಣೇಶೋತ್ಸವ ವಿಜೃಂಭಣೆಯಿಂದ ನಡೆಯಬೇಕು ಎಂಬುದು ನಮ್ಮ ಆಶಯ ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಚಿವರು,ಧಾರ್ಮಿಕ ಆಚರಣೆ, ವೈಭವೀಕರಣಕ್ಕೆ ಕುಂದು ಆಗದಂತೆ ನಿಯಮ ಬರಲಿದೆ.
ಕೊರೋನಾ ಪಾಸಿಟಿವಿಟಿ ರೇಟ್ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸ ಇದೆ. ಹೆಚ್ಚು ಜನಸಂದಣಿ ಆದರೆ ಅದೇ ಅಪಾಯವಾಗುವ ಸಾಧ್ಯತೆಯಿದೆ.
ನಂಬಿಕೆ ಮತ್ತು ಆರೋಗ್ಯ ವಿಚಾರದಲ್ಲಿ ಸರಕಾರ ಮಧ್ಯದ ಸೂತ್ರ ಸಿದ್ಧ ಮಾಡಲಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Kshetra Samachara
21/08/2021 04:08 pm