ಉಡುಪಿ: ದೇಶದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲೆಯ ಎಲ್ಲ ಬ್ಲಾಕ್ ಕಾಂಗ್ರೆಸ್ ಹಾಗೂ ಮುಂಚೂಣಿ ಘಟಕಗಳ ಸಹಯೋಗದೊಂದಿಗೆ ಪಾದಯಾತ್ರೆ ನಡೆಯಿತು.ಪಾಯಾತ್ರೆಯು ಕಾಂಗ್ರೆಸ್ ಭವನದಿಂದ ಪ್ರಾರಂಭಗೊಂಡು ,ಬ್ರಹ್ಮಗಿರಿ-ಆಸ್ಪತ್ರೆ ರಸ್ತೆ, ಜೋಡುಕಟ್ಟೆ- ಕೋರ್ಟ್ ರಸ್ತೆ – ಕೆ.ಎಂ. ಮಾರ್ಗದ ಮೂಲಕ ಸಾಗಿ ಬಂದು ಸರ್ವಿಸ್ ಬಸ್ ಸ್ಟ್ಯಾಂಡ್ ನ ಕ್ಲಾಕ್ ಟವರ್ ನಲ್ಲಿ ಸಮಾಪನಗೊಂಡಿತು.ಅಲ್ಲಿ ಕಾಂಗ್ರೆಸ್ ಮುಖಂಡರು ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪಾದಯಾತ್ರೆ ಮುಗಿಸಿದರು.ಪಾಯಾತ್ರೆಯ ಉದ್ದಕ್ಕೂ ಕಾಂಗ್ರೆಸ್ ಕಾರ್ಯಕರ್ತರು ದೇಶದ ಸ್ವಾತಂತ್ರ್ಯದ ಹಿರಿಮೆಯನ್ನು ಸಾರಿದರು. ಪಾದಯಾತ್ರೆಯಲ್ಲಿ ಮಾಜಿ ಸಚಿವರು ˌಮಾಜಿ ಶಾಸಕರು,ˌ ವಿಧಾನ ಪರಿಷತ್ ಸದಸ್ಯರು ಹಾಗೂ ಪಕ್ಷದ ಮುಖಂಡರು,ಕಾರ್ಯಕರ್ತರು ಭಾಗವಹಿಸಲಿದ್ದರು.
Kshetra Samachara
14/08/2021 05:28 pm