ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕಾರ್ಕಳ ಕಿಟ್ ಗೋಲ್ ಮಾಲ್ ಜೋರು: ಕಿಟ್ ಸಿಕ್ಕಿದೆ ಎಂದು ಹೇಳಿದವರಿಗೆ 25 ಸಾವಿರ ಬಹುಮಾನ!

ಕಾರ್ಕಳ: ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲೆಂದು ಕೆಲ ದಾನಿಗಳು ನೀಡಿದ ಹಣದಲ್ಲಿ ಚಿನ್ನದ ಕೆಲಸಗಾರರು, ಕ್ಷೌರಿಕರು, ಕಾರ್ಮಿಕರು,ಆಟೋರಿಕ್ಷಾ ಚಾಲಕರು, ಬಸ್ಸ್ ಸಿಬಂದಿಗಳು, ಕಾರು ಚಾಲಕರು ಮೊದಲಾದ ಕಾರ್ಮಿಕರಿಗೆ ಕೇವಲ 300 ರೂ. ಕಿಟ್ಟನ್ನು ವಿತರಿಸಿ ಅದನ್ನೇ ಕಾರ್ಮಿಕ ಇಲಾಖೆಯ 899 ರೂ. ಕಿಟ್ ಎಂದು ನಂಬಿಸಿ ಸರಕಾರಕ್ಕೆ ಬೋಗಸ್ ಫಲಾನುಭವಿಗಳ ಪಟ್ಟಿಯನ್ನು ಸಲ್ಲಿಸಲಾಗಿದೆ.ಈ ಮೂಲಕ ಸರಕಾರಕ್ಕೆ ಮತ್ತು ಕ್ಷೇತ್ರದ ಜನತೆಗೆ ದ್ರೋಹ ಬಗೆಯಲಾಗಿದೆ. ಹಸಿದ ಹೊಟ್ಟೆಗೆ ತಿನ್ನಲು ನೀಡಿದ ಆಹಾರದ ಹಣವನ್ನು ‌ಲೂಟಿ ಮಾಡಿ‌ ಬಡವರನ್ನು ವಂಚಿಸಲಾಗಿದೆ. ಇಂತಹವರನ್ನು ದೇವರೂ ಕ್ಷಮಿಸಲಾರ ಎಂದು ಕಾರ್ಕಳ ಯುವ ಕಾಂಗ್ರೆಸ್ ಹೇಳಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಕಾರ್ಕಳ ಯುವ ಕಾಂಗ್ರೆಸ್ ಮುಖಂಡ ಶುಭದ ರಾವ್ ,ಕಳೆದ ವರ್ಷ ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರಿಗೆ ನೆರವಾಗಲೆಂದು ಕರ್ನಾಟಕ ಕಟ್ಟಡ ಕಾರ್ಮಿಕ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಕಳ ತಾಲೂಕಿಗೆ ಬಿಡುಗಡೆಯಾಗಿದ್ದ ‌45 ಲಕ್ಷ ರೂಪಾಯಿಯ 5000 ಕಿಟ್ ಗಳಲ್ಲಿ ಒಂದನ್ನೂ ವಿತರಿಸದೆ ಶಾಸಕ ಸುನೀಲ್ ಕುಮಾರ್ ಮತ್ತು ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರ ನಡೆಸಿದ್ದಾರೆ.ಈ ಸಂಬಂಧ ಲೋಕಾಯುಕ್ತಕ್ಕೆ ದೂರು ನೀಡಿ ಹೋರಾಟ ಮಾಡಿದ್ದರ ಫಲವಾಗಿ ಈ ಬಾರಿ ಬಿಡುಗಡೆಯಾಗಿದ್ದ ಆಹಾರ ಕಿಟ್ ನ್ನು ಸರಕಾರದ ಆದೇಶದಂತೆ ಪ್ರತೀ ಗ್ರಾಮ ಪಂಚಾಯತ್ ಮತ್ತು ಪುರಸಭೆಯ ಮೂಲಕ ಫಲಾನುಭವಿಗಳ ಪಟ್ಟಿ ‌ತಯಾರಿಸಿ‌ ಅವರ ನೇತೃತ್ವದಲ್ಲಿಯೇ ವಿತರಿಸಲಾಗಿದೆ. ಇದರಿಂದಾಗಿ ಯಾರಿಗೆ ಕಿಟ್ ಸಲ್ಲಬೇಕಿತ್ತೊ‌ ಅವರಿಗೆ ಸಲ್ಲಿಸಿದೇವೆ ಎಂಬ ತೃಪ್ತಿ ನಮಗಿದೆ.ಇಲ್ಲಿ ನಾವು ಇಟ್ಟಿರುವ ರಟ್ಟಿನ ಬಾಕ್ಸ್ ರೀತಿಯ ಒಂದೇ ಒಂದು ಕಿಟ್ ಯಾರಿಗಾದರೂ ಸಿಕ್ಕಿದೆ ಎಂದು ಹೇಳಿದರೆ ಅಂಥವರಿಗೆ 25 ಸಾವಿರ ಬಹುಮಾನ ನೀಡುತ್ತೇವೆ ಎಂದು ಶುಭದ ರಾವ್ ಸವಾಲು ಹಾಕಿದ್ದಾರೆ‌!

Edited By : Manjunath H D
Kshetra Samachara

Kshetra Samachara

03/08/2021 06:11 pm

Cinque Terre

13.57 K

Cinque Terre

2

ಸಂಬಂಧಿತ ಸುದ್ದಿ