ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ಬೇಕಿದೆ ಚಿಕಿತ್ಸೆ!

ಉಡುಪಿ:ಕೆಲ ದಿನಗಳಿಂದ ಅಡೆತಡೆಗಳೊಂದಿಗೇ ಬಡವರಿಗೆ ಆರೋಗ್ಯ ಸೇವೆ ನೀಡುತ್ತಿರುವ ಉಡುಪಿಯ ಕೂಸಮ್ಮ ಶಂಭು ಶೆಟ್ಟಿ ಸ್ಮರಣಾರ್ಥ ಹಾಜಿ ಅಬ್ದುಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಶಾಶ್ವತವಾಗಿ ಬಂದ್ ಆಗುತ್ತದೆಯೇ ಎಂಬ ಅನುಮಾನ ಕಾಡುತ್ತಿದೆ. ಇವತ್ತು ಬೆಳಿಗ್ಗೆ ಹೆರಿಗೆಗೆಂದು ಬಂದ ಮಹಿಳೆಯರನ್ನು ಆಸ್ಪತ್ರೆಯಿಂದ ವಾಪಸು ಕಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿತು.

ಮುಖ್ಯವಾಗಿ ಈ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ ನೀಡಬೇಕಾದ ಹಲವು ತಿಂಗಳ ವೇತನವನ್ನು ಸರಕಾರ ಬಾಕಿ ಇರಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ 2 ತಿಂಗಳ ಹಿಂದೆ ಆಸ್ಪತ್ರೆಯ ವೈದ್ಯರು, ದಾದಿಯರು ಮತ್ತು ಆಸ್ಪತ್ರೆಯ ಸಿಬ್ಬಂದಿ ದಿಢೀರ್ ಎಂದು ಮುಷ್ಕರ ಹೂಡಿದ್ದರು.ಇದರಿಂದಾಗಿ ಬಡ ರೋಗಿಗಳಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು.ಇವತ್ತು ಕೂಡ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದವರನ್ನು ಚಿಕಿತ್ಸೆ ನೀಡದೆ ವಾಪಾಸು ಕಳಿಸಲಾಗಿತ್ತು.ಇದರಿಂದಾಗಿ ಕೆಲಹೊತ್ತು ಆತಂಕ ಮನೆಮಾಡಿತ್ತು. ಇದೇ ಹೊತ್ತಿಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು.

ಕಳೆದ ಮೂರು ವರ್ಷಗಳಿಂದ ಖಾಸಗಿಯವರು ನಡೆಸುತ್ತಿದ್ದ ಈ ಆಸ್ಪತ್ರೆ ಸಾಕಷ್ಟು ಉತ್ತಮ ಸೇವೆ ನೀಡುತ್ತಿತ್ತು.ಆದರೆ ಬಿ.ಆರ್ ಶೆಟ್ಟಿ ಈಗ ಆರ್ಥಿಕ ಸಮಸ್ಯೆಗೆ ಈಡಾಗಿದ್ದು, ಆಸ್ಪತ್ರೆಯ ಭವಿಷ್ಯವೂ ತೂಗುಯ್ಯಾಲೆಯಲ್ಲಿದೆ. ರಾಜ್ಯದಲ್ಲಿರುವ ಸರಕಾರ ಇತ್ತಕಡೆ ಗಮನ ಹರಿಸಿ ವೈದ್ಯರಿಗೆ ಮತ್ತು ಸಿಬ್ಬಂದಿಗಳ ಬಾಕಿ ವೇತನ ನೀಡಿ ,ಈ ಹಿಂದಿನಂತೆ ಮುನ್ನಡೆಸಿಕೊಂಡು ಹೋಗಬೇಕು. ಈ ಮೂಲಕ ಬಡರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.

ಒಟ್ಟಾರೆ ಉಡುಪಿಯಲ್ಲಿ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಆರೋಗ್ಯ ಸೇವೆ ನೀಡುತ್ತಿದ್ದ ಈ ಆಸ್ಪತ್ರೆಯನ್ನು ಸರಕಾರ ಮತ್ತೆ ವಹಿಸಿಕೊಂಡು ಬಡ ರೋಗಿಗಳ ಸೇವೆ ಮಾಡಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

Edited By : Nagesh Gaonkar
Kshetra Samachara

Kshetra Samachara

30/07/2021 04:17 pm

Cinque Terre

24.27 K

Cinque Terre

1

ಸಂಬಂಧಿತ ಸುದ್ದಿ