ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ವಿಧಾನಸಭೆ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಶಾಸಕರ ಭವನದ ತಮ್ಮ ಕೊಠಡಿ ಮುಂಭಾಗ ಗುಡಿಸುತ್ತಿರುವ ಪೋಟೋ ವೈರಲ್ ಆಗಿ ಶಾಸಕರ ಸರಳತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸರಳ ರಾಜಕಾರಣಿ, ಕುಂದಾಪುರದ ವಾಜಪೇಯಿ ಅಂತ ಹೆಸರುವಾಸಿಯಾದ, ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು, ಬೆಂಗಳೂರಿನ ಶಾಸಕರ ಭವನದ ತಮ್ಮ ಕೊಠಡಿಗೆ ಹೋದಾಗ ಪಕ್ಕದ ಕೊಠಡಿಯ ದುರಸ್ತಿ ಕಾರ್ಯ ನಡೆಯುತ್ತಿತ್ತು.
ಹೀಗಾಗಿ ದುರಸ್ತಿ ಕಾರ್ಯದಿಂದ ಬಂದ ಧೂಳು ಹಾಲಾಡಿ ಅವರ ರೂಂ ಮುಂದೆ ಕೂಡ ಬಿದ್ದಿತ್ತು. ದೂಳನ್ನು ಸ್ವತಃ ತಾವೇ ಗುಡಿಸುತ್ತಿರುವುದನ್ನು ನೋಡಿದವರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸದ್ಯ ಈ ಫೋಟೋ ವೈರಲ್ ಆಗಿದೆ. ಇದರ ಜೊತೆಗೆ 4 ಬಾರಿ ಬಿಜೆಪಿಯಿಂದ ಹಾಗೂ ಒಂದು ಬಾರಿ ಪಕ್ಷೇತರವಾಗಿ ಗೆದ್ದ ಹಾಲಾಡಿ ಅವರಿಗೆ ಈ ಬಾರಿ ಆದ್ರೂ ಸಚಿವ ಸ್ಥಾನ ನೀಡಿ ಅಂತ ಆಗ್ರಹ ಕೂಡ ಕೇಳಿ ಬರುತ್ತಿದೆ.
Kshetra Samachara
29/07/2021 03:19 pm