ಮುಲ್ಕಿ: ಕೊರೋನಾ ದಿನಗಳಲ್ಲಿ ಸರಕಾರಿ ಅಧಿಕಾರಿಯಾಗಿದ್ದು ನಿಸ್ವಾರ್ಥವಾಗಿ ಜನಸೇವೆ ಮಾಡಿ ಪ್ರೀತಿ-ವಿಶ್ವಾಸ ಗಳಿಸಿರುವ ಮುಲ್ಕಿ ನಗರ ಪಂಚಾಯತ್ ಆರೋಗ್ಯಾಧಿಕಾರಿ ಲಿಲ್ಲಿ ನಾಯರ್ ಕಾರ್ಯವೈಖರಿ ಶ್ಲಾಘನೀಯ ಎಂದು ಮುಲ್ಕಿ ನ. ಪಂ.ಮುಖ್ಯಾಧಿಕಾರಿ ಚಂದ್ರಪೂಜಾರಿ ಹೇಳಿದರು. ಅವರು ಮುಲ್ಕಿ ನಗರ ಪಂಚಾಯಿತಿಯಲ್ಲಿ ಕೆಲವು ವರ್ಷಗಳಿಂದ ಆರೋಗ್ಯಾಧಿಕಾರಿಯಾಗಿದ್ದು ಭಡ್ತಿ ಹೊಂದಿ ಸೋಮೇಶ್ವರ ಪಟ್ಟಣ ಪಂಚಾಯಿತಿಗೆ ವರ್ಗಾವಣೆಗೊಂಡಿರುವ ಲಿಲ್ಲಿ ನಾಯರ್ ರವರಿಗೆ ನಗರ ಪಂಚಾಯತ್ ವತಿಯಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಅವರು ಮಾತನಾಡಿ ನಿಸ್ವಾರ್ಥ ಸೇವೆ ಮಾಡಿದರೆ ಜನ ಗುರುತಿಸುತ್ತಾರೆ ಹಾಗೂ ಪ್ರೀತಿ-ವಿಶ್ವಾಸ ತೋರಿಸುತ್ತಾರೆ ಎಂದರು. ಈ ಸಂದರ್ಭ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಅಂಚನ್, ಮಾಜಿ ಅಧ್ಯಕ್ಷ ಸುನಿಲ್ ಆಳ್ವ,ನ. ಪಂ. ಸದಸ್ಯರಾದ ಪುತ್ತುಬಾವ, ಹರ್ಷ ರಾಜಶೆಟ್ಟಿ,ಮಂಜುನಾಥ ಕಂಬಾರ, ಮುನ್ನಾ ಯಾನೆ ಮಹೇಶ, ಮತ್ತಿತರರು ಉಪಸ್ಥಿತರಿದ್ದರು.ನ. ಪಂ. ಕಂದಾಯಾಧಿಕಾರಿ ಅಶೋಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು
Kshetra Samachara
24/02/2021 06:42 pm