ಉಡುಪಿ: ಕೊರೊನಾ ಎರಡನೇ ಅಲೆ ಭೀತಿ ವಿಚಾರವಾಗಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇರಳ ಮತ್ತು ಮಹಾರಾಷ್ಟ್ರದ ಜೊತೆ ನಮ್ಮ ಜಿಲ್ಲೆಗಳಿಗೆ ವ್ಯಾಪಾರ ಸಂಬಂಧವಿದೆ.
ಕೆಲ ಪ್ರದೇಶಗಳಲ್ಲಿ ದಿನನಿತ್ಯದ ಓಡಾಟವೂ ಇದೆ.
ಗಡಿ ಜಿಲ್ಲೆಗಳಿಗೆ ಕೆಲವೊಂದು ನಿರ್ಬಂಧ ಹಾಕಲು ಉನ್ನತಮಟ್ಟದ ಚರ್ಚೆಯಾಗಿದೆ. ಕೇರಳದಿಂದ ಕರ್ನಾಟಕಕ್ಕೆ ಬರಲು 15 -16 ರಸ್ತೆಗಳಿವೆ. ಪ್ರಮುಖ ಮಾರ್ಗಗಳಿಗೆ ಸೀಮಿತಗೊಳಿಸಿ ಉಳಿದ ರಸ್ತೆಗಳನ್ನು ಬಂದ್ ಮಾಡುವ ಚಿಂತನೆ ಇದೆ ಎಂದರು.
ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಕೇರಳ- ಮಹಾರಾಷ್ಟ್ರದಿಂದ ಬರುವ ಎಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಟೆಸ್ಟ್ ಸರ್ಟಿಫಿಕೇಟ್ ಗಳನ್ನು ತರಿಸಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ. ಮಹಾರಾಷ್ಟ್ರ- ಕೇರಳ- ಆಂಧ್ರ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದರು.
ಪಿಎಫ್ಐ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದ ಅವರು, ಈಗಾಗಲೇ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆ- ವಿಚಾರಣೆ ಆಗುತ್ತೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದರು.
ಐಎಂಎ ಮನ್ಸೂರ್ ನಿಂದ ಸಿದ್ದರಾಮಯ್ಯ- ಎಚ್ ಡಿಕೆ ಗೆ ಹಣ ಸಂದಾಯ ವಿಚಾರವಾಗಿ ಮಾತನಾಡಿದ ಅವರು, ಐಎಂಎ ಪ್ರಕರಣವನ್ನು ಸಿಬಿಐ ಮಾಡ್ತಾ ಇದೆ. ನಮ್ಮ ರಾಜ್ಯ ಪೊಲೀಸರು ತನಿಖೆ ಮಾಡುತ್ತಿಲ್ಲ. ಹೀಗಾಗಿ ವಿಚಾರಣೆಯ ಅಂಶಗಳು ನನ್ನ ಗಮನಕ್ಕೆ ಬಂದಿಲ್ಲ ಎಂದರು.
Kshetra Samachara
20/02/2021 05:49 pm