ಮಂಗಳೂರು: ಉಳ್ಳಾಲ ಒಂಬತ್ತುಕೆರೆ ಮೈದಾನದಲ್ಲಿ ಪಾಪ್ಯುಲರ್ ಫ್ರಂಟ್ ಡೇ ಅಂಗವಾಗಿ ‘ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜೊತೆಗೆ’ ಘೋಷಣೆಯಡಿ ಯುನಿಟಿ ಮಾರ್ಚ್ ಹಾಗೂ ಬೃಹತ್ ಸಾರ್ವಜನಿಕ ಸಭೆ ನಡೆಯಿತು.
ಈ ಸಂದರ್ಭ ಪಿಎಫ್ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ಮಾತನಾಡಿ, ಪಿಎಫ್ಐ ಯಾವುದರ ಬಾಲಗೋಂಚಿಯಲ್ಲ. ಆರೆಸೆಸ್ಸ್ ಪಾಠ ಕೂಡ ಬೇಕಾಗಿಲ್ಲ. ಸೆಕ್ಯೂಲರ್ ನಾಯಕರು ಎಂದು ನಡೆಯುವವರು ಕೂಡ ಕೆಲವು ಬಾರಿ ದಾರಿ ತಪ್ಪಿ ಮಾತನಾಡುತ್ತಾರೆ. ಆರೆಸೆಸ್ಸ್ ಸಿದ್ಧಾಂತಕ್ಕೆ ಭಾರತದಲ್ಲಿ ದೊಡ್ಡ ಸಂಖ್ಯೆಯ ಹಿಂದೂಗಳೇ ವಿರೋಧಿಗಳಾಗಿದ್ದಾರೆ ಎಂದರು.
ಪಿಎಫ್ಐ ಗೆ ದೇಶದ ಮೇಲೆ ಗೌರವ ಇದೆ. ಒಬ್ಬನ ತಲೆಗೆ ದೇಶದ್ರೋಹಿ ಹಣೆಪಟ್ಟಿ ಕಟ್ಟುವ ಮೊದಲು ದೇಶದ್ರೋಹಿಗಳು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮೋದಿ, ಅಮಿತ್ ಶಾ ನಡುವೆ ಆಡಳಿತಕ್ಕೆ ಸಂಬಂಧಿಸಿ ಗಲಾಟೆ ನಡೆಯುತ್ತಾ ಇದೆ. ಜನರ ಹಕ್ಕನ್ನು ನೀಡಲು ಇವರಿಂದ ಆಗುವುದಿಲ್ಲ. ಗಲಾಟೆ ಮಾಡುವುದು, ಲಾಠಿ ರುಚಿ ತೋರಿಸುವುದು ಇವರ ಗುರಿ. ಇವರ ಸಿದ್ಧಾಂತಗಳಿಗೆ ಪಿಎಫ್ಐ ಎಂದಿಗೂ ಮಣಿಯುವುದಿಲ್ಲ ಎಂದರು.
ಶಾಫಿ ಬೆಳ್ಳಾರೆ ಮಾತನಾಡಿ, ದೇಶದಲ್ಲಿ ಹಿಂದುತ್ವ, ಫ್ಯಾಸಿಸ್ಟ್ ಧೋರಣೆ ಅನುಸರಿಸುತ್ತಿದೆ. ಜಮಖಂಡಿಯಲ್ಲಿ ನಡೆಯಬೇಕಾಗಿದ್ದ ಈ ಕಾರ್ಯಕ್ರಮವನ್ನು ಫ್ಯಾಸಿಸ್ಟ್ ರು ಭಯಭೀತರಾಗಿ ನಡೆಯದಂತೆ ಮಾಡಿದ್ದಾರೆ. ಒಟ್ಟಿನಲ್ಲಿ ದೇಶಕ್ಕೆ ಆರೆಸೆಸ್ಸ್ ಶತ್ರುವಾಗಿದೆ ಎಂದರು.
ಕಾರ್ಯಕ್ರಮ ಪ್ರಯುಕ್ತ ಮಧ್ಯಾಹ್ನ ಅಬ್ಬಕ್ಕ ಸರ್ಕಲ್ ನಿಂದ ಯುನಿಟ್ ಮಾರ್ಚ್ ನಡೆಯಿತು. ಸಫ್ವಾನ್ ಕಮಾಂಡ್ ಆಗಿ ಕಾರ್ಯ ನಿರ್ವಹಿಸಿದರು. ಬ್ಯಾಂಡ್ ಮೂಲಕ ವಿವಿಧ ಘೋಷಣೆ ಗಳೊಂದಿಗೆ ಯೂನಿಟಿ ಮಾರ್ಚ್ ಸಭಾಂಗಣ ವರೆಗೆ ನಡೆಯಿತು. ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Kshetra Samachara
17/02/2021 08:51 pm