ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪ್ರೇಮಿಗಳ ದಿನಾಚರಣೆಗೆ ಬಜರಂಗದಳ ತೀವ್ರ ವಿರೋಧ

ಉಡುಪಿ: ಪ್ರೇಮಿಗಳ ದಿನಾಚರಣೆಗೆ ಬಜರಂಗದಳ ತೀವ್ರ ವಿರೋಧ ವ್ಯಕ್ತಪಡಿಸಿದೆ.ಬಜರಂಗದಳದ ಕರ್ನಾಟಕ ದಕ್ಷಿಣ ಸಂಯೋಜಕ ಸುನಿಲ್ ಕೆ.ಆರ್. ಹೇಳಿಕೆ ನೀಡಿ,ಯುವಜನಾಂಗ ಪ್ರೇಮಿಗಳ ದಿನ ಆಚರಿಸಬಾರದು.ಎರಡು ವರ್ಷಗಳ ಹಿಂದೆ ಇದೇ ದಿನ ಪುಲ್ವಾಮದಲ್ಲಿ ದಾಳಿಯಾಗಿತ್ತು.ಭಯೋತ್ಪಾದಕರು ನಮ್ಮ ಯೋಧರನ್ನು ಹತ್ಯೆ ಮಾಡಿದ್ದರು.ಫೆಬ್ರವರಿ 14 ಹುತಾತ್ಮ ದಿವಸ ಅಥವಾ ಬಲಿದಾನ ದಿವಸ ಆಚರಿಸೋಣ ಎಂದು ಹೇಳಿದ್ದಾರೆ.

ಜಗತ್ತಿಗೆ ಸಂಸ್ಕೃತಿಯನ್ನು ಕಳಿಸಿಕೊಟ್ಟ ದೇಶ ಭಾರತ ಎಂದಿರುವ ಅವರು,ಭಾರತದ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿ ನಡೆಯುತ್ತಲೇ ಬಂದಿದೆ.ವ್ಯಾಲೆಂಟೈನ್ಸ್ ಡೇ ಯಿಂದ ನಮ್ಮ ಸಂಸ್ಕೃತಿ ನಾಶವಾಗುತ್ತದೆ.ಪ್ರೇಮಿಗಳ ದಿನಾಚರಣೆ ಮಾಡಿದ್ರೆ ಯುವಜನಾಂಗ ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತದೆ.ಪ್ರೇಮಿಗಳ ದಿನಾಚರಣೆಯಿಂದ ಅನೈತಿಕ ಚಟುವಟಿಕೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

13/02/2021 03:37 pm

Cinque Terre

11.45 K

Cinque Terre

3

ಸಂಬಂಧಿತ ಸುದ್ದಿ