This is a modal window.
ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಅದೃಷ್ಟದ ಆಟದಲ್ಲಿ ಬಿಜೆಪಿ ಬೆಂಬಲಿತರು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಪೂರ್ಣಿಮಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರೆ, ಉಪಾಧ್ಯಕ್ಷ ಸ್ಥಾನ ಅಶೋಕ್ ಬಂಗೇರ ಆಯ್ಕೆಯಾದರು.
ಕಳೆದ ಫೆಬ್ರವರಿ 10 ರಂದು ನಡೆದ ಹಳೆಯಂಗಡಿ ಪಂಚಾಯತ್ ಚುನಾವಣೆಯ 22 ಸ್ಥಾನಗಳ ಪೈಕಿ ಬಿಜೆಪಿ ಬೆಂಬಲಿತರು 11 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ ಪಕ್ಷ 11 ಸ್ಥಾನಗಳಿಸಿ ಸಮಬಲದ ಹೋರಾಟ ನಡೆಸಿತ್ತು. ಬುಧವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಅದೃಷ್ಟ ಬಿಜೆಪಿ ಬೆಂಬಲಿತರಿಗೆ ಒಲಿದಿದೆ. ಅಧ್ಯಕ್ಷರಾಗಿ ಸರಕಾರದ ಮಹಿಳಾ ಮೀಸಲಾತಿ ಅನ್ವಯ ಬಿಜೆಪಿ ಬೆಂಬಲಿತ ಪಕ್ಷದಿಂದ ಪೂರ್ಣಿಮ ಹಾಗೂ ಎದುರಾಳಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಪದ್ಮಾವತಿ ಶೆಟ್ಟಿ ಸ್ಪರ್ಧಿಸಿದ್ದರು.
ಬುಧವಾರ ಪಂಚಾಯತ್ ಸಭಾಂಗಣದಲ್ಲಿ ನಡೆದ ಆಂತರಿಕ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರು11:11 ಸಮಬಲ ಕಂಡಿದ್ದು ಅದೃಷ್ಟದ ಟಾಸ್ ಆಧಾರದಲ್ಲಿ ಪೂರ್ಣಿಮ ಜಯಗಳಿಸಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರಾಗಿ ಅಶೋಕ್ ಬಂಗೇರ ಹಾಗೂ ಕಾಂಗ್ರೆಸ್ ಬೆಂಬಲಿತ ಚಂದ್ರಕುಮಾರ್ ಸ್ಪರ್ಧಿಸಿದ್ದು ಅದೃಷ್ಟದಾಟ ದಲ್ಲಿ ಬಿಜೆಪಿ ಬೆಂಬಲಿತ ಅಶೋಕ್ ಬಂಗೇರಾ ಜಯಗಳಿಸಿದ್ದಾರೆ.
ಅಧ್ಯಕ್ಷ-ಉಪಾಧ್ಯಕ್ಷ ಬಿಜೆಪಿ ಪಾಲಾಗುತ್ತಲೇ ಬಿಜೆಪಿ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಸ್ಥಳದಲ್ಲಿ ಮುಲ್ಕಿ-ಮೂಡಬಿದ್ರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ಮುಲ್ಕಿ ನ.ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ, ಸದಸ್ಯರಾದ ಶೈಲೇಶ್ ಕುಮಾರ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್, ನಿರ್ದೇಶಕ ಶ್ಯಾಮ್ ಪಡುಪಣಂಬೂರು ಮತ್ತಿತರರು ಉಪಸ್ಥಿತರಿದ್ದು ವಿಜಯೋತ್ಸವ ಆಚರಿಸಿದರು.
ಅಹಿತಕರ ಘಟನೆಗಳು ನಡೆಯದಂತೆ ಮುಲ್ಕಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ವಿಜಯೋತ್ಸವದ ನಡುವೆಯೂ ನಿರಾಸೆಯಿಂದ ಕಾಂಗ್ರೆಸ್ ನಾಯಕರು ಕಾರಿನಲ್ಲಿ ತೆರಳುತ್ತಿರುವಾಗ ಬಿಜೆಪಿಗರ ವಿಜಯೋತ್ಸವ ಮತ್ತಷ್ಟು ಜೋರಾಯಿತು
Kshetra Samachara
10/02/2021 03:41 pm