ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ತೈಲ, ಅಡುಗೆ ಅನಿಲ ಸಹಿತ ಅಗತ್ಯ ವಸ್ತು ಬೆಲೆ ಇಳಿಸಿ; ಎಸ್ ಡಿಟಿಯು

ಮಂಗಳೂರು: ತೈಲ ಬೆಲೆ, ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಎಸ್ ಡಿಟಿಯು ಗ್ಯಾಸ್ ಸಿಲಿಂಡರ್, ಕಟ್ಟಿಗೆ ಪ್ರದರ್ಶಿಸಿ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಸಿತು.

ಈ ಸಂದರ್ಭ ಎಸ್ ಡಿಟಿಯು (ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್) ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ‌ ಬೆಲೆಯನ್ನು ಇಳಿಸಬೇಕು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು, ಸ್ಥಗಿತಗೊಳಿಸಿರುವ ಅಡುಗೆ ಅನಿಲ ಸಬ್ಸಿಡಿ ಮತ್ತೆ ಆರಂಭಿಸಬೇಕೆಂದು ಆಗ್ರಹಿಸಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್ ಡಿಟಿಯು ದ.ಕ. ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಮಾತನಾಡಿ, ಕೋವಿಡ್ ಸಂಕಷ್ಟದಿಂದ ಚೇತರಿಸುವ ಕಾಲದಲ್ಲಿ ಕೇಂದ್ರ ಸರಕಾರ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆಯುವ ಕಾರ್ಯ ನಡೆಸುತ್ತಿದೆ.‌

ಯುಪಿಎ ಸರಕಾರ ಇರುವಾಗ ತೈಲ ಬೆಲೆ, ಅಡುಗೆ ಇಂಧನ ಬೆಲೆ ಏರಿಕೆಯಾದಾಗ ಬೀದಿಗಿಳಿದ ಬಿಜೆಪಿಗರು ಇಂದು ಮೌನ ವಹಿಸಿ ಕೋಮಾಕ್ಕೆ ಜಾರಿದ್ದಾರೆ. ಅಲ್ಲದೆ, ಬೆಲೆ ಏರಿಕೆ ಬಗ್ಗೆ ಜನರು ಮಾತನಾಡಬಾರದೆಂದು ಕೇಂದ್ರ ಸರಕಾರ ಭಾವನಾತ್ಮಕವಾಗಿ ವಿವಿಧ ವಿಚಾರಗಳನ್ನು ಎಳೆದು ತಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದ್ದರಿಂದ ಇಂತಹ ಬಿಜೆಪಿ ಸರಕಾರವನ್ನು ಕಿತ್ತೊಗೆಯಲು ಜನರು ಇನ್ನಷ್ಟು ಆಂದೋಲನ ರೂಪಿಸಬೇಕಾಗಿದೆ ಎಂದು ಹರಿಹಾಯ್ದರು.

Edited By : Manjunath H D
Kshetra Samachara

Kshetra Samachara

10/02/2021 01:25 pm

Cinque Terre

7.9 K

Cinque Terre

0

ಸಂಬಂಧಿತ ಸುದ್ದಿ