ಮಂಗಳೂರು: ಬಿಲ್ಲವ ಸಮುದಾಯ, ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಹಾಗೂ ಕೋಟಿ-ಚೆನ್ನಯರ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿರುವ ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಅವರ ಮುಖಕ್ಕೆ ಮೊದಲು ಮಸಿ ಬಳಿಯುವ ಬಿಲ್ಲವ ಸಮುದಾಯದವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಫೇಸ್ಬುಕ್ ಲೈವ್ನಲ್ಲಿ ಹೇಳಿಕೆ ನೀಡಿದ್ದಾರೆ.
ಬಿಲ್ಲವರ ನಾಯಕ ಬಿ.ಜನಾರ್ದನ ಪೂಜಾರಿಯವರ ಕಾಲು ಹಿಡಿಯೋದಿಲ್ಲ ಎಂದು ಹೇಳಿಕೆ ನೀಡಿರುವ ಜಗದೀಶ್ ಅಧಿಕಾರಿಯವರು, ಜನಾರ್ದನ ಪೂಜಾರಿಯವರ ಕಾಲು ಹಿಡಿದು ಕ್ಷಮೆ ಯಾಚಿಸಬೇಕು. ವೀರ ಪುರುಷರಾದ ಕೋಟಿ- ಚೆನ್ನಯರನ್ನು ಅವಹೇಳನ ಮಾಡಿದ್ದಕ್ಕೆ ಮೂರು ದಿನದಲ್ಲಿ ತಪ್ಪು ಕಾಣಿಕೆ ಹಾಕಿ ಜಗದೀಶ್ ಅಧಿಕಾರಿಯವರು ಕ್ಷಮೆ ಯಾಚಿಸಬೇಕು ಎಂದು ಪ್ರತಿಭಾ ಕುಳಾಯಿ ಆಗ್ರಹಿಸಿದ್ದಾರೆ.
Kshetra Samachara
08/02/2021 02:30 pm