ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಮಾನವ ಹಕ್ಕು ಉಲ್ಲಂಘನೆಯಾದಲ್ಲಿ ಯಾರೂ ಧ್ವನಿ ಎತ್ತಬಹುದು"

ಮಂಗಳೂರು: ಮಾನವ ಹಕ್ಕುಗಳ ಉಲ್ಲಂಘನೆಯಾದಾಗ ಯಾವ ದೇಶದ, ಯಾವ ವ್ಯಕ್ತಿಯೂ ಧ್ವನಿ ಎತ್ತಬಹುದು. ಇದು ದೇಶದ ಆಂತರಿಕ ವಿಚಾರಕ್ಕೆ ಧಕ್ಕೆ ತರುವ ವಿಚಾರವಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ ಭವ್ಯಾ ನರಸಿಂಹ ಮೂರ್ತಿ ಹೇಳಿದರು.

ನಗರದ ಬೆಂದೂರು ಚರ್ಚ್ ಕಮ್ಯುನಿಟಿ ಸಭಾಂಗಣದಲ್ಲಿ 'ರೈತ ಕಾನೂನು' ವಿಚಾರವಾಗಿ ಮಾತನಾಡಿದ ಅವರು, ಕೇಂದ್ರದ ರೈತ ಮಸೂದೆಯನ್ನು ವಿರೋಧಿಸಿ ಸಾಕಷ್ಟು ದಿನ ಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಈಗಾಗಲೇ 170 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ನೀರು ಮತ್ತಿತರ ಮೂಲಭೂತ ಸೌಕರ್ಯ ಸ್ಥಗಿತಗೊಳಿಸಲಾಗಿದೆ. ಇಂಟರ್ನೆಟ್ ಬ್ಯಾನ್ ಮಾಡಲಾಗಿದೆ. ಇದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಧ್ವನಿ ಎತ್ತುವುದು ದೇಶದ ಆಂತರಿಕ ವಿಚಾರಕ್ಕೆ ಮೂಗು ತೂರಿಸಿದಂತಾಗುವುದಿಲ್ಲ.‌ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಯಾವ ದೇಶದ ವ್ಯಕ್ತಿಗೂ ಮಾತನಾಡುವ ಹಕ್ಕು ಇದೆ ಎಂದರು.

ದೇಶದಲ್ಲಿ ಮೂರು ರೈತ ಮಸೂದೆ ಜಾರಿಗೊಳಿಸುವ ಬಗ್ಗೆ ಸಾಕಷ್ಟು ಪರ- ವಿರೋಧದ ಚರ್ಚೆಗಳು ಕೇಳಿ ಬರುತ್ತಲೇ ಇವೆ. ರೈತರು ಕೇಂದ್ರ ರೈತ ಮಸೂದೆ ವಿರೋಧಿಸಿದರೆ, ಸರಕಾರ ಮಾತ್ರ ಇದರಿಂದ ದೇಶದ ರೈತರ ಜೀವನಮಟ್ಟ ಸುಧಾರಣೆಯಾಗುತ್ತದೆ ಎಂದು ಹೇಳುತ್ತಿದೆ. ಆದರೆ 2006ರಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಅವರು ಮುಕ್ತ ಮಾರುಕಟ್ಟೆ ಪದ್ಧತಿ ಜಾರಿಗೊಳಿಸಿದ್ದರು‌. ಆದರೆ, ಇಂದಿಗೂ ಅಲ್ಲಿನ 97 ಪ್ರತಿಶತ ರೈತರು ಬಡವರಾಗಿದ್ದು, ಇನ್ನೂ ಅವರ ಜೀವನಮಟ್ಟ ಸುಧಾರಣೆ ಆಗಿಲ್ಲ‌‌. ಅಲ್ಲಿನ ಕೃಷಿಕರು ಈಗಲೂ ಉದ್ಯೋಗ ಹುಡುಕಿಕೊಂಡು ವಲಸೆ ಹೋಗುತ್ತಲೇ ಇದ್ದಾರೆ. ಆದ್ದರಿಂದ ಕೇಂದ್ರದ ಕೃಷಿ ಮಸೂದೆ ಜಾರಿಯಿಂದ ರೈತರ ಜೀವನ ಮಟ್ಟ ಸುಧಾರಣೆಯಾಗುತ್ತದೆ ಎಂಬುದು ಸತ್ಯಕ್ಕೆ ದೂರವಾದ ಮಾತು ಎಂದು ಭವ್ಯಾ ನರಸಿಂಹ ಮೂರ್ತಿ ಹೇಳಿದರು.

Edited By : Manjunath H D
Kshetra Samachara

Kshetra Samachara

04/02/2021 09:03 pm

Cinque Terre

9.51 K

Cinque Terre

3

ಸಂಬಂಧಿತ ಸುದ್ದಿ