ಬಂಟ್ವಾಳ: ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ವೀಕ್ಷಣೆಗೆ ಸಂಬಂಧಿಸಿ ಬಿಜೆಪಿ- ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮಧ್ಯೆ ಜೋರು ಮಾತಿನ ಸಮರವೇ ನಡೆದ ಘಟನೆ ಶನಿವಾರ ಬೆಳಗ್ಗೆ ನಡೆಯಿತು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜ. 31ರಂದು ರಾಜ್ಯ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಇದಕ್ಕೆ ಮುಂಚಿತವಾಗಿ ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ನೇತೃತ್ವದಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ವೀಕ್ಷಣೆಗೆ ಆಗಮಿಸಿದ್ದರು.
ಈ ವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಕೂಡ ಜತೆಗಿದ್ದರು. ಆದರೆ, ಸ್ಥಳದಲ್ಲಿ ಬಿಜೆಪಿಯವರು ಸೇರಿದ್ದ ಹಿನ್ನೆಲೆಯಲ್ಲಿ ಪೊಲೀಸರು ಯೋಜನಾ ಘಟಕದ ಗೇಟ್ ಹಾಕಿ ತಡೆದರು. ಈ ವೇಳೆ ಎರಡೂ ಪಕ್ಷಗಳ ಪ್ರಮುಖರ ನಡುವೆ ತಾರಕ ಸ್ವರದಲ್ಲಿ ವಾಗ್ವಾದ ನಡೆಯಿತು. ಬಳಿಕ ಪೊಲೀಸರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದು, ಪರಿಸ್ಥಿತಿ ತಿಳಿಯಾಗಿಸಲಾಯಿತು.
Kshetra Samachara
30/01/2021 01:21 pm