ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ವಿವಿಧ ಬೇಡಿಕೆಯಿರಿಸಿ ಎಬಿವಿಪಿ ಪ್ರತಿಭಟನೆ

ಮಂಗಳೂರು: ವಿದ್ಯಾರ್ಥಿ ವೇತನ ಬಿಡುಗಡೆ ಮಾಡಿ, ತಕ್ಷಣ ಹಾಸ್ಟೆಲ್ ಗಳು ತೆರೆಯಲಿ, ಅತಿಥಿ ಉಪನ್ಯಾಸಕರ ನೇಮಕಾತಿಯಾಗಲಿ‌ ಎಂಬ ಬೇಡಿಕೆಯನ್ನಿರಿಸಿ ರಾಜ್ಯ ಸರಕಾರದ ವಿರುದ್ಧ ಎಬಿವಿಪಿ ನಗರದ ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.

ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಪ್ರತಿಭಟನಾಕಾರರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಮಾಡಿದರು.

ಶೈಕ್ಷಣಿಕ ಚಟುವಟಿಕೆಗಳು ಕೊರೊನಾ ಸಂಕಷ್ಟ ಕಾಲದಲ್ಲಿ ಸ್ಥಗಿತಗೊಂಡಿದ್ದರೂ, ಇದೀಗ ಮತ್ತೆ ಚೇತರಿಕೆ ಆಗುತ್ತಿದೆ. ಆದರೆ ಕಾಲೇಜು ಪ್ರಾರಂಭ ಆದರೂ ಇನ್ನೂ ಸರಿಯಾಗಿ ಅತಿಥಿ ಉಪನ್ಯಾಸಕರ ನೇಮಕಾತಿಯಾಗಿಲ್ಲ. ಸ್ಕಾಲರ್ಶಿಪ್ ಇನ್ನೂ ಬಿಡುಗಡೆಯಾಗಿಲ್ಲ.‌ ಹಾಸ್ಟೆಲ್ ಗಳ ಅನೇಕ ವಿಚಾರಗಳನ್ನು ಸರಕಾರ ಕಡೆಗಣನೆ ಮಾಡಲಾಗಿದೆ‌ ಎಂದು ವಿಳಂಬ ನೀತಿಯನ್ನು ಖಂಡಿಸಿ ಎಬಿವಿಪಿ ಪ್ರತಿಭಟನೆ ನಡೆಸಿದೆ‌.

Edited By : Manjunath H D
Kshetra Samachara

Kshetra Samachara

19/01/2021 12:55 pm

Cinque Terre

9.04 K

Cinque Terre

0

ಸಂಬಂಧಿತ ಸುದ್ದಿ