ಸುಬ್ರಹ್ಮಣ್ಯ: ರಾಜ್ಯ ಸಂಪುಟ ದರ್ಜೆಯ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನಿನ್ನೆ ಸ್ವಕ್ಷೇತ್ರ ಸುಳ್ಯಕ್ಕೆ ಭೇಟಿ ನೀಡಿದರೆ,ಇಂದು ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ, ಹಾಗೂ ಕುಟ್ರುಪಾಡಿ ಗ್ರಾಮದ ಕೇಪು ಎಂಬಲ್ಲಿಗೆ ಭೇಟಿ ನೀಡಿದರು.
ಸಚಿವ ಎಸ್.ಅಂಗಾರರಿಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇಗುಲದ ವತಿಯಿಂದ ಅದ್ದೂರಿ ಸ್ವಾಗತ ಮಾಡಲಾಯಿತು. ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಸಚಿವ ಎಸ್.ಅಂಗಾರರು,ನಂತರದಲ್ಲಿ ಕೇಪು ಲಕ್ಷ್ಮೀಜನಾರ್ಧನ, ಪಂಚಮುಖಿ ಆಂಜನೇಯ ಮುಖ್ಯಪ್ರಾಣ ದೇಗುಲದಲ್ಲಿ ದೇವರ ದರ್ಶನ ಪಡೆದರು.ಸಚಿವರಾಗಿ ತಾಲೂಕಿನ ವಿವಿಧ ಕಡೆಗಳಿಗೆ ಆಗಮಿಸಿದ ಎಸ್.ಅಂಗಾರ ಅವರಿಗೆ ಕಾರ್ಯಕರ್ತರು ಅದ್ದೂರಿಯ ಸ್ವಾಗತ ನೀಡಿದರು.ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ದಾರಿಯ ನೆಟ್ಟಣ,ಮರ್ಧಾಳ,ಕುಟ್ರುಪಾಡಿ,ಇಚ್ಲಂಪಾಡಿ,ಪೆರಿಯಶಾಂತಿ ಕೊಕ್ಕಡ,ಸೇರಿದಂತೆ ಎಲ್ಲಾ ಕಡೆಗಳಲ್ಲಿ ಪಕ್ಷದ ಧ್ವಜ ಹಿಡಿದ ಕಾರ್ಯಕರ್ತರು ಸಚಿವರಿಗೆ ಸ್ವಾಗತ ನೀಡುವ ದೃಶ್ಯಗಳು ಕಂಡುಬಂದಿದೆ.
Kshetra Samachara
16/01/2021 06:54 pm