ಉಡುಪಿ: ತಾಲೂಕು ಪಂಚಾಯತ್, ಜಿ.ಪಂ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಜನಸೇವಕ್ ಸಮಾವೇಶ ನಡೆಸುತ್ತಿದೆ.ಉಡುಪಿಯಲ್ಲಿ ಜನಸೇವಕ್ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು ಉಡುಪಿಯ ಅಮೃತ ಗಾರ್ಡನ್ ನಲ್ಲಿ ನಡೆಯಲಿರುವ ಸಮಾವೇಶಕ್ಕೆ ಬಿಜೆಪಿ ನಾಯಕರ ದಂಡೇ ಆಗಮಿಸಿದೆ.ಸಚಿವ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ,ಈರಣ್ಣ ಕಡಾಡಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.
ಸಮಾವೇಶ ಕ್ಕೂ ಮುನ್ನ ಸಚಿವ ಈಶ್ವರಪ್ಪ ಮಣಿಪಾಲ್ ಹೊಟೇಲ್ ಇನ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ್ದಾರೆ.
Kshetra Samachara
12/01/2021 12:30 pm