ಕುಂದಾಪುರ: ಖ್ಯಾತ ವಾಗ್ಮಿ ಆದರ್ಶ ಗೋಖಲೆ ಮಾತನಾಡಿ ಭಾಜಪ ಕುಂದಾಪುರ ಯುವಮೋರ್ಚಾ ವತಿಯಿಂದ ನಡೆದ ವಿವೇಕ ಧ್ವನಿ ಕಾರ್ಯಕ್ರಮ, ವಿವೇಕನಂದರ ಹುಟ್ಟುಹಬ್ಬ ಕೇವಲ ವ್ಯಕ್ತಿಯ ಆರಾಧನೆ ಅಲ್ಲ. ಅವರ ಆದರ್ಶಗಳನ್ನು ಪಾಲಿಸುತ್ತೇವೆ ಎಂದು ಪ್ರತಿಜ್ಞೆ ಮಾಡಿಬೇಕು. ಜಗ್ಗತ್ತು ಭಾರತದತ್ತ ನೋಡುವಂತೆ ಭಾರತೀಯರನ್ನು ಗೌರವಿಸುವಂತೆ ಮಾಡಿದ ಮಹಾನ್ ಸಂತ ವಿವೇಕಾನಂದರು.ವಿವೇಕಾನಂದರು ವೇದಾಂತ ಪಾಂಡಿತ್ಯಕ್ಕೆ ಮಾರುಹೋದ ಜಾನ್ ರೈಟ್ ಚಿಕಾಗೋ ಸಮ್ಮೇಳನದಲ್ಲಿ ಭಾಗವಹಿಸಲು ನಿಮ್ಮ ಬಳಿ ಗುರುತು ಪತ್ರ ಕೇಳುವುದು ಒಂದೇ ಸೂರ್ಯನಿಗೆ ನಿನಗಾರು ಬೆಳಕು ಕೊಡಲು ಅನುಮತಿ ಕೊಟ್ಟವರು ಕೇಳುವುದು ಒಂದೇ ಎಂದು ಹೇಳಿದ್ದರು. ರಾಕ್ ಫೆಲ್ಲರ್ ಎಂಬ ವಿದೇಶಿ ಶ್ರೀಮಂತ ವಿವೇಕಾನಂದರ ಚಿಂತನೆಗಳಿಂದ ಆಕರ್ಷಿತನಾಗಿ ರಾಕ್ ಫೆಲ್ಲರ್ ಫೌಂಡೇಶನ್ ಸ್ಥಾಪಿಸಿ ಸಾವಿರಾರು ಬಡ ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇಂಗ್ಲೆಂಡ್ ನಲ್ಲಿ ಐಸಿಎಸ್ ಪರೀಕ್ಷೆ ಬರೆದು ಮೊದಲ ಐದರಲ್ಲಿ ಸ್ಥಾನ ಪಡೆದಿದ್ದ ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ವಿವೇಕನಂದರ ಆದರ್ಶಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ಸ್ಪೂರ್ತಿಯಾಯಿತು.
ಈ ದೇಶದ ನಾಗರಿಕರ ಶಿಕ್ಷಣ ಪದ್ದತಿಯನ್ನು ಒಡೆದರೇ ಮಾತ್ರ ದೇಶದ ಮುಂದಿನ ಪೀಳಿಗೆಯವರು ತಾಯ್ನಾಡನ್ನು ದ್ವೇ಼ಷಿಸುವಂತೆ ಮಾಡಲು ಸಾಧ್ಯ ಎಂದು ತೀರ್ಮಾನಿಸಿದ ಮೆಕಾಲೆ ನೂತನ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದ. ಸ್ವಾತಂತ್ರ್ಯ ನಂತರವು ಅದೇ ಶಿಕ್ಷಣ ಪದ್ದತಿಯಿಂದಾಗಿ ಭಾರತಕ್ಕೆ ಹೊರಗಿನ ಶತ್ರುವಿಗಿಂತ ಒಳಗಿನ ಶತ್ರುಗಳೆ ಜಾಸ್ತಿ.
ನಾವೆಲ್ಲಾ ಒಂದೇ ಮನಸ್ಸಿಂದ ಒಟ್ಟಾಗಿ ನಮ್ಮ ದೇಶವನ್ನು, ನಮ್ಮ ಧರ್ಮವನ್ನು ರಕ್ಷಿಸುವ ಅನಿವಾರ್ಯತೆ ಎದುರಾಗಿದೆ. ಅದಕ್ಕೋಸ್ಕರ ಎಲ್ಲರ ಮನೆಯಲ್ಲೂ ವಿವೇಕಾನಂದ ಆದರ್ಶ ಚಿಂತನೆಗಳ ಪುಸ್ತಕಗಳನ್ನು ಓದಿ, ಮಕ್ಕಳಿಗೂ ಅವರ ಪುಸ್ತಕಗಳನ್ನು ಓದಲು ಕೊಡಿ. ಈ ದೇಶ ನರೇಂದ್ರ ಪಥದಲ್ಲಿ ಸುಭಿಕ್ಷೆ ಇಂದ ಸಾಗುತ್ತಿದ್ದು, ದೇಶವನ್ನು, ಧರ್ಮವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದು ನುಡಿದರು.
Kshetra Samachara
11/01/2021 07:19 pm