ಮಂಗಳೂರು: ಗ್ರಾಪಂ ಚುನಾವಣೆ ಸಂದರ್ಭ ಉಜಿರೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಸಂಘ ಪರಿವಾರದವರು. ಆದರೆ, ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ತಿರುಚಿದ ವೀಡಿಯೊ ಇರಿಸಿ ಎಸ್ ಡಿಪಿಐನ ಮೂವರು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದೆ ಎಂದು ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್ ಡಿಪಿಐ 'ತಿರುಚಿದ ವೀಡಿಯೊವನ್ನು ಆಧಾರವಾಗಿಟ್ಟು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಬೆಳ್ತಂಗಡಿಯಲ್ಲಿ ರಾತೋರಾತ್ರಿ ಮುಸ್ಲಿಮ್ ಯುವಕರನ್ನು ಬಂಧಿಸಲಾಗಿತ್ತು.
ಈಗ ನೈಜ ಪಾಕಿಸ್ತಾನ ಪ್ರೇಮಿ ಸಂಘಿಗಳ ಮುಖವಾಡ ಕಳಚಿಕೊಂಡಿದೆ. @spdkpolice, ಪರಿವಾರದ ಗೂಂಡಾಗಳನ್ನು ಬಂಧಿಸಿ ಕರ್ತವ್ಯಕ್ಕೆ ನಿಷ್ಠರಾಗುವ ಧೈರ್ಯ ತೋರುತ್ತೀರಾ?' ಎಂದು ಪ್ರಶ್ನಿಸಿದೆ.
ಇದರ ಬೆನ್ನಲ್ಲೇ ಪವನ್ ಶೆಟ್ಟಿ ಎಂಬ ಯುವಕ ಗ್ರಾಪಂ ಚುನಾವಣೆ ವಿಜಯೋತ್ಸವದಲ್ಲಿ ತಾನು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದೇನೆಂದು ತಿರುಚಿದ ವೀಡಿಯೊ ವೈರಲ್ ಮಾಡಲಾಗಿದೆ ಎಂದು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.
ಅಲ್ಲದೆ, ಈ ಘೋಷಣೆ ತಾನು ಕೂಗಿಲ್ಲ. ವೈರಲ್ ಆಗಿರುವ ವೀಡಿಯೋ ದಲ್ಲಿ ಬಳಿ ಅಂಗಿಯ ಯುವಕನನ್ನು ತೋರಿಸಿ ತಾನು ಎಂದು ಬಿಂಬಿಸಲಾಗುತ್ತಿದೆ. ಆದರೆ, ಅಂದು ತಾನು ನೀಲಿ ಅಂಗಿ ತೊಟ್ಟಿದ್ದು, ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ವಿನಂತಿಸಿದ್ದಾರೆ.
ಇದೀಗ ಎರಡು ಕಡೆಯಿಂದಲೂ ಪರ- ವಿರೋಧದ ಮಾತು ಕೇಳಿ ಬರುತ್ತಿದ್ದು, ತನಿಖೆಯಿಂದ ಮಾತ್ರ ನೈಜ ವಿಷಯ ಬೆಳಕಿಗೆ ಬರಬೇಕಿದೆ
Kshetra Samachara
04/01/2021 07:44 am