ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಜ್ರಿ: ಬಿಜೆಪಿ ಬಂಡಾಯ ಅಭ್ಯರ್ಥಿ ಯನ್ನೇ ಮನೆಗೆ ಕರೆಸಿ ಗೌರವ ಸಲ್ಲಿಸಿದ ಶಾಸಕ ಸುಕುಮಾರ ಶೆಟ್ಟಿ!

ಉಡುಪಿ: ಆಜ್ರಿ ಗ್ರಾಪಂ ಚುನಾವಣೆ ಅಖಾಡ ಉಡುಪಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಆಜ್ರಿ ಮೂರನೇ ವಾರ್ಡಿನಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ರಾಜು ಶೆಟ್ಟಿ ಅವರು ಸ್ಪರ್ಧಿಸಿ 315 ಮತ ಗಳಿಸಿ ಶಾಸಕ ಸುಕುಮಾರ ಶೆಟ್ಟಿ ಅವರ ಮನ ಗೆದ್ದಿದ್ದಾರೆ.

ರಾಜು ಶೆಟ್ಟಿ ಅವರ ಎದುರಾಳಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರವಾಗಿ ಶಾಸಕರು ಮತಯಾಚನೆ ಮಾಡಿದ ಹಿನ್ನೆಲೆಯಲ್ಲಿ ಎದುರಾಳಿ ಬಹು ಮತಗಳಿಂದ ಜಯಶಾಲಿಯಾಗಿದ್ದಾರೆ.

ರಾಜು ಶೆಟ್ಟಿ 315 ಮತ ಗಳಿಸಿದ ಹಿನ್ನೆಲೆಯಲ್ಲಿ ಯಾವುದೇ ದ್ವೇಷ ರಾಜಕಾರಣ ಮಾಡದ ಶಾಸಕರು, ನಮ್ಮ ಪಕ್ಷದಲ್ಲಿ ಸತತ 20 ವರ್ಷಗಳಿಂದ ದುಡಿದ ಕಾರ್ಯಕರ್ತನನ್ನು ಸ್ಮರಿಸಿ ಮನೆಗೆ ಕರೆದು ಗೌರವ ಸಲ್ಲಿಸಿದ್ದಾರೆ.

"ಮುಗ್ಧ ಮನಸ್ಸಿನ ಶಾಸಕ ಸುಕುಮಾರ್ ಶೆಟ್ಟಿ ಯವರು, ರಾಜಕೀಯವಾಗಿ ಇತರ ರಾಜಕಾರಣಿಗಳಂತೆ ಅಲ್ಲವೇ ಅಲ್ಲ. ಧರ್ಮದರ್ಶಿ ಯಂತೆ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದಾರೆ" ಎಂದು ರಾಜು ಶೆಟ್ಟಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಮುಂದಿನ ದಿನದಲ್ಲಿ ಬಿಜೆಪಿ ಪಕ್ಷ ಕಟ್ಟುವಲ್ಲಿ ಆಜ್ರಿಯಲ್ಲಿ ರಾಜು ಶೆಟ್ಟಿ ಮುಂಚೂಣಿಯಲ್ಲಿರುತ್ತಾರೆ ಎಂದು ಶಾಸಕ ಸುಕುಮಾರ್ ಶೆಟ್ಟಿ ಇದೇ ಸಂದರ್ಭ ಆಶ್ವಾಸನೆ ನೀಡಿದ್ದಾರೆ.

-ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ

Edited By : Manjunath H D
Kshetra Samachara

Kshetra Samachara

03/01/2021 04:13 pm

Cinque Terre

28.65 K

Cinque Terre

2

ಸಂಬಂಧಿತ ಸುದ್ದಿ