ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಮತ ಎಣಿಕೆ ಕೇಂದ್ರದತ್ತ ಎಲ್ಲರ ಚಿತ್ತ; ಕಾಲೇಜು ರಸ್ತೆಯಲ್ಲಿ ಜನ ಸಂದಣಿ, ಮಾಸ್ಕ್ ಮರೆತ ' ಪ್ರಜ್ಞಾವಂತರು' !

ಕುಂದಾಪುರ: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದ್ದು, ನಗರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಬೆಳಿಗ್ಗೆ 7 ಗಂಟೆಯಿಂದಲೇ ಆರಂಭಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಶಾಸ್ತ್ರೀ ವೃತ್ತ ಹಾಗೂ ಭಂಡಾರ್ಕಾರ್ಸ್ ಕಾಲೇಜಿನ ರಸ್ತೆಯಲ್ಲಿ ಬೆಳಗ್ಗಿನಿಂದಲೇ ಜನ ಜಂಗುಳಿ ಸೇರಿದೆ.

ತಾಲೂಕಿನ 43 ಗ್ರಾಪಂಗಳ 530 ಸ್ಥಾನಗಳಿಗಾಗಿ 266 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು. ಉಳಿದ 5 ಕಡೆ ಅವಿರೋಧ ಆಯ್ಕೆ ನಡೆದಿದೆ. 1262 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ತಾಲೂಕಿನ 1,86,685 ಮತದಾರರು ಮತ ಚಲಾಯಿಸುವ ಅವಕಾಶ ಪಡೆದಿದ್ದರು. 1150 ಚುನಾವಣಾ ಅಧಿಕಾರಿಗಳು ಚುನಾವಣೆ ಜವಾಬ್ಧಾರಿ ಹೊತ್ತಿದ್ದರು.

ಮತಪತ್ರಗಳ ಮೂಲಕ ಮತದಾನ ನಡೆದಿರುವ ಕಾರಣಕ್ಕೆ ಚುನಾವಣಾ ಫಲಿತಾಂಶ ತಡವಾಗಿ ಪ್ರಕಟಗೊಳ್ಳುವ ಸಾಧ್ಯತೆ ಇರುವುದರಿಂದ ಇಂದು ಇಡೀ ದಿನ ಜನಜಂಗುಳಿ ಏರ್ಪಡುವ ಸಾಧ್ಯತೆ ಇದೆ.

ಕೊರೊನಾ ಜತೆಗೆ ಕರಾವಳಿಯಲ್ಲಿ ಇದೀಗ ಎರಡನೇ ಹಂತದ ಬ್ರಿಟನ್ ವೈರಸ್ ಭೀತಿ ಇದ್ದರೂ ಚುನಾವಣಾ ಫಲಿತಾಂಶ ಪ್ರಕಟವಾಗುವ ಹಿನ್ನೆಲೆಯಲ್ಲಿ ಆಗಮಿಸಿದ್ದ ಅಭ್ಯರ್ಥಿಗಳ ಬೆಂಬಲಿಗರು ಸರ್ಕಾರದ ನಿಯಮಗಳನ್ನೆಲ್ಲ ಗಾಳಿಗೆ ತೂರಿದ್ದಾರೆ.

ಅವರೆಲ್ಲ ಗುಂಪು ಗುಂಪಾಗಿ ಸೇರುತ್ತಿದ್ದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನೂ ಪಾಲಿಸದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.ಜಡ್ಕಲ್ ಗ್ರಾಮ ಪಂಚಾಯಿತಿಯ ಮುದೂರು 3ನೇ ವಾರ್ಡ್ ಅವಳಿಗೆ ಅಭ್ಯರ್ಥಿಗಳ ಜಯ.

ಕುಂದಾಪುರ: ಕುಂದಾಪುರ ತಾಲೂಕಿನ ಗ್ರಾಮ ಪಂಚಾಯಿತಿಯ ಮುದೂರು ಗ್ರಾಮದ 3ನೇ ವಾರ್ಡ್ ಅವಳಿ ಅಭ್ಯರ್ಥಿಗಳು ಇದೀಗ ಜಯಭೇರಿ ಗಳಿಸಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಮುದೂರು ಗ್ರಾಮದ 3ನೇ ವಾರ್ಡ್ ನಲ್ಲಿ ಸ್ಪರ್ಧಿಸಿದ ಲಕ್ಷ್ಮಣ ಶೆಟ್ಟಿ ಮತ್ತು ಸೂಲ್ಯ ಭೋವಿ ಭರ್ಜರಿ ಅಂತರದಿಂದ ಜಯಗಳಿಸಿದ್ದಾರೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಲಕ್ಷ್ಮಣ ಶೆಟ್ಟಿ 90 ಮತಗಳಿಂದ ಜಯ ಗಳಿಸಿದ್ದು ಹಾಗೂ ಬಿಜೆಪಿ ಬೆಂಬಲಿತ ಇನ್ನೋರ್ವ ಅಭ್ಯರ್ಥಿ ಸೂಲ್ಯ ಭೂಮಿ 74 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.ಉಳಿದ ಅಭ್ಯರ್ಥಿಗಳ ಮತ ಎಣಿಕೆ ಪ್ರಕ್ರಿಯೆ ಲ್ಲಿದ್ದು ಇನ್ನಷ್ಟೇ ತಿಳಿಯಬೇಕಾಗಿದೆ.

Edited By : Manjunath H D
Kshetra Samachara

Kshetra Samachara

30/12/2020 12:53 pm

Cinque Terre

40.51 K

Cinque Terre

2

ಸಂಬಂಧಿತ ಸುದ್ದಿ