ಉಡುಪಿ: ಉಡುಪಿ ಜಿಲ್ಲೆಯ ಗ್ರಾಪಂ ಚುನಾವಣೆ ಫಲಿತಾಂಶ ಒಂದೊಂದಾಗಿ ಘೋಷಣೆಯಾಗುತ್ತಿದ್ದು,ಬಿಜೆಪಿ ಬೆಂಬಲಿತ 25 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಬೆಂಬಲಿತ 14 ಅಭ್ಯರ್ಥಿಗಳ ಗೆಲುವಿನ ನಗೆ ಬೀರಿದ್ದಾರೆ. ಈವರೆಗೆ ಅವಿರೋಧವಾಗಿ 128 ಮಂದಿ ಆಯ್ಕೆಯಾಗಿದ್ದಾರೆ. ಈ ಪೈಕಿ ಬಿಜೆಪಿಯಿಂದ 98 ಮಂದಿ ಅವಿರೋಧವಾಗಿ ಆಯ್ಕೆಗೊಂಡಿದ್ದರೆ,
ಕಾಂಗ್ರೆಸ್ ನಿಂದ ಸುಮಾರು 30 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2245 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
Kshetra Samachara
30/12/2020 12:08 pm