ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೊಕ್ಕೊಟ್ಟು: 'ವೀರರಾಣಿ ಅಬ್ಬಕ್ಕ ಭವನ ನಿರ್ಮಿಸಿ'; ಜ.1ರಂದು ಮೌನ ಪ್ರತಿಭಟನೆ

ಮಂಗಳೂರು: ವೀರರಾಣಿ ಅಬ್ಬಕ್ಕ ಭವನ ಸಹಿತ ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ವತಿಯಿಂದ ಜನವರಿ 1 ರಂದು ಮೌನ ಪ್ರತಿಭಟನೆ ನಡೆಯಲಿದೆ ಎಂದು ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಹೇಳಿದೆ.

ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ದಿನಕರ ಉಳ್ಳಾಲ್, ವೀರರಾಣಿ ಅಬ್ಬಕ್ಕ ಭವನದ ನಿರ್ಮಾಣ ಅತಿ ಶೀಘ್ರ ಆಗಬೇಕು.

ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲಾಗಿರುವ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರಕ್ಕೆ ಕೂಡಲೇ ಅನುದಾನ ಬಿಡುಗಡೆ ಮಾಡಿ ಅಧ್ಯಯನ ಕೇಂದ್ರ ಪ್ರಾರಂಭಿಸಬೇಕು.

ಈಗಾಗಲೇ ಭಾರಿ ಚರ್ಚೆಗೆ ಕಾರಣವಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ 66 ತೊಕ್ಕೊಟ್ಟು ಪ್ಲೈ ಓವರ್ ಮತ್ತು ರಾಷ್ಟ್ರೀಯ ಹೆದ್ದಾರಿ - 66 ಉಳ್ಳಾಲ ಓವರ್ ಬ್ರಿಡ್ಜ್ ಹೊಸ ಜಂಕ್ಷನ್ ಈ ಎಲ್ಲ ಸ್ಥಳಗಳಿಗೆ ವೀರರಾಣಿ ಅಬ್ಬಕ್ಕ ಅವರ ಹೆಸರಿಡಬೇಕು.

ಆದರೆ, ಈ ಎಲ್ಲ ವಿಷಯಗಳ ಬಗ್ಗೆ ಕೂಡ ಮುಖ್ಯ ಮಂತ್ರಿ ಗಳಿಗೆ ಮತ್ತು ಜಿಲ್ಲಾಧಿ ಕಾರಿಗಳಲ್ಲಿ ಮನವಿ ಮಾಡಿದ್ದು, ಈವರೆಗೂ ಕೂಡ ಕಾರ್ಯರೂಪಕ್ಕೆ ಬಾರದಿರುವುದು ವಿಷಾದನೀಯ ಎಂದರು.

ಇನ್ನು ಅದೇ ಜಾಗದಲ್ಲಿ ಬ್ಯಾರಿ ಭವನ ನಿರ್ಮಾಣ ಆಗಲಿದೆ ಎನ್ನುವುದು, ಇದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಇದನ್ನು ಖಂಡಿಸಿ ಜನವರಿ 1 ರಂದು ತೊಕ್ಕೊಟ್ಟುವಿನ ಹೊಸ ಬಸ್ಟ್ಯಾಂಡ್ ಬಳಿ ಮೌನ ಪ್ರತಿಭಟನೆ ನಡೆಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಆನಂದ ಕೆ.ಅಸೈಗೋಳಿ ಮತ್ತಿತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

29/12/2020 09:57 pm

Cinque Terre

40.54 K

Cinque Terre

3

ಸಂಬಂಧಿತ ಸುದ್ದಿ