ಮಂಗಳೂರು: ಎಂಆರ್‌ಜಿ ಗ್ರೂಪ್ ವತಿಯಿಂದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ 'ಸತ್ಪಾತ್ರರಿಗೆ ಸಹಾಯಧನ ವಿತರಣೆ' ನಡೆಯಿತು.
ಕಳೆದ ವರ್ಷ ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಅದ್ಧೂರಿ ಪ್ರಕಾಶಾಭಿನಂದನ ಕಾರ್ಯಕ್ರಮದ ಸಂದರ್ಭ ಎಂಆರ್ ಜಿ ಗ್ರೂಪ್ ಬೆಂಗಳೂರು ಸಂಸ್ಥಾಪಕ ಕೆ.ಪ್ರಕಾಶ್ ಶೆಟ್ಟಿಯವರು ಪ್ರತಿ ವರ್ಷ ತನ್ನ ಹುಟ್ಟೂರಿನ ಜನತೆಯ ಸಂಕಷ್ಟಕ್ಕೆ, ಅನಾರೋಗ್ಯ ಪೀಡಿತರಿಗೆ, ಅಶಕ್ತರಿಗೆ, ವಿದ್ಯಾಭ್ಯಾಸದ ನೆರವಿಗೆ ಒಂದು ಕೋಟಿ ರೂ. ಮೊತ್ತ ನೀಡುತ್ತೇನೆ ಎಂದು ಘೋಷಿಸಿದ್ದರು.
ಅದರಂತೆ ಈ ಬಾರಿಯೂ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಒಟ್ಟು 500ಕ್ಕಿಂತಲೂ ಹೆಚ್ಚಿನ ಸಂತ್ರಸ್ತರಿಗೆ 1 ಕೋಟಿ ರೂ.ಗಿಂತಲೂ ಮಿಕ್ಕಿದ ಸಹಾಯಧನ ವಿತರಿಸಿದರು. ಇದೇ ವೇಳೆ ಮಾತನಾಡಿದ ಪ್ರಕಾಶ್ ಶೆಟ್ಟಿ, ನಾನು 20 ವರ್ಷದ ಹಿಂದೆ ಕಷ್ಟ ಅನುಭವಿಸಿದ್ದೆ. ಜೀವನದಲ್ಲಿ ನಾನು ಅನೇಕ ಸವಾಲು, ಕಷ್ಟಗಳನ್ನು ಎದುರಿಸಿದ್ದೇನೆ.
ಹೀಗಾಗಿ ನೀವು ಧೃತಿಗೆಡಬೇಡಿ ಎಂದರು. ಡಾ.ಎಂ.ಮೋಹನ್ ಆಳ್ವ ಅವರು ಕೆ. ಪ್ರಕಾಶ್ ಶೆಟ್ಟಿಯವರ ಪರಿಚಯ ಮತ್ತು ಫಲಾನುಭವಿಗಳ ಪರಿಚಯ ಮಾಡಿದರು. ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.
Kshetra Samachara
28/12/2020 08:39 pm